ಮೈಸೂರು : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ೬೬/೧೧ ಕೆ.ವಿ ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕ.ವಿ.ಪ್ರ.ನಿ.ನಿ ವತಿಯಿಂದ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಡಿಸೆಂಬರ್ ೧೦ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೦೬ ಗಂಟೆಯವರೆಗೆ ಮೈಸೂರು ಸಿ.ಟಿ ಸುತ್ತ-ಮುತ್ತ, ಆಶೋಕ ರಸ್ತೆ, ಇಂದಿರಾ ನಗರ, ಇಟ್ಟಿಗೆಗೂಡು, ನಜರ್‌ಬಾದ್, ನಾಗಮ್ಮ ಆಸ್ಪತ್ರೆ, ಛತ್ರಿ ಮರ ಸುತ್ತ-ಮುತ್ತ, ಸಬರ್ ಬಸ್‌ಸ್ಟಾಂಡ್ ಸುತ್ತ-ಮುತ್ತ, ಹಳ್ಳದ ಕೆರೆ, ಚಂದ್ರಗುಪ್ತ ರಸ್ತೆ, ಕುರುಬಗೇರಿ, ಕುಂಬಾರಗೇರಿ, ಸಿಟಿ ಬಸ್ ಸ್ಟಾಂಡ್ ಸುತ್ತ-ಮುತ್ತ, ರಮಾವಿಲಾಸ್ ರಸ್ತೆ, ಅರಸು ರಸ್ತೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅನಿಯಮಿತ ವ್ಯತ್ಯಯವಾಗಲಿದ್ದು, ಆದುದರಿಂದ ಸಾರ್ವಜನಿಕರು ಹಾಗೂ ಕೈಗಾರಿಕೋಧ್ಯಮಿಗಳು ಸಹಕರಿಸಬೇಕು ಎಂದು ಚಾ.ವಿ.ಸ.ನಿ.ನಿ.ಯ., ನ.ರಾ.ಮೊಹಲ್ಲಾ ವಿಭಾಗ, ಕಾರ್ಯ ಮತ್ತು ಪಾಲನೆ, ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ವಿ.ವಿ ಮೊಹಲ್ಲಾ ವಿಭಾಗ ವ್ಯಾಪ್ತಿಯ ೬೬/೧೧ ಕೆ.ವಿ ವಿಜಯನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ೩ನೇ ತ್ರೈಮಾಸಿಕಕ ನಿರ್ವಹಣಾ ಕೆಲಸದ ನಿಮಿತ್ತ ಡಿಸೆಂಬರ್ ೧೧ ರಂದು ಬೆಳಗ್ಗೆ ೧೦ ಗಂಟೆಯಿoದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗೋಕುಲಂ ೧ನೇ ಮತ್ತು ೨ನೇ ಹಂತ, ಮಹದೇಶ್ವರ ಬಡಾವಣೆ, ವಿಜಯನಗರ ೧ನೇ ಮತ್ತು ೨ನೇ ಹಂತ, ಹಿನಕಲ್, ಯಾದವಗಿರಿ, ಮಂಜುನಾಥಪುರ, ಮಹಾಜನ ಲೇಔಟ್, ಒಂಟಿಕೊಪ್ಪಲ್, ಗೋಕುಲಂ ೩ನೇ ಹಂತ, ಜಯಲಕ್ಷ್ತ್ರ್ಮಿಪುರಂ, ಆಕಾಶವಾಣಿ, ಇ.ಎಸ್.ಐಆಸ್ಪತ್ರೆ, ಹಸುಕರು ಪಾರ್ಕ್, ಗೋಕುಲಂ ಪಾರ್ಕ್, ಕಾಳಿದಾಸ ರೋಡ್, ಯಾದವಗಿರಿ ಕೈಗಾರಿಕಾ ಪ್ರದೇಶ, ವಿಜಯನಗರ ವಾಟರ್ ಸಪ್ಲ್ತ್ಯೈ, ಆದಿಪಂಪಾ ರಸ್ತೆ, ಜನರಲ್ ತಿಮ್ಮಯ್ಯರಸ್ತೆ, ಬೃಂದಾವನ ಬಡಾವಣೆ, ಯೋಗನರಸಿಂಹಸ್ವಾಮಿ ದೇವಸ್ಥಾನ, ಆಯಿಸ್ಟಾರ್ ಬೇ, ಸಿ.ಎಸ್.ಆರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಚಾ.ವಿ.ಸ.ನಿ.ನಿ.ಯ., ವಿ.ವಿ.ಮೊಹಲ್ಲಾ ವಿಭಾಗ, ಕಾರ್ಯ ಮತ್ತು ಪಾಲನೆ, ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





