ಮೈಸೂರು: ನಾಳೆ ಆಯುಧಪೂಜೆಯ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೂವು-ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ.
ಇಂದು ಬೆಳಿಗ್ಗೆಯಿಂದಲೇ ಜನರು ಹೂವು-ಹಣ್ಣು, ಬೂದುಗುಂಬಳಕಾಯಿ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಖರೀದಿ ಮಾಡುತ್ತಿದ್ದು, ಹೂವುಗಳ ಬೆಲೆಯಂತೂ ಗಗನಕ್ಕೇರಿದೆ.
ಇದನ್ನು ಓದಿ : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ: ಸಿಎಂ, ಡಿಸಿಎಂಗೆ ವಿಶೇಷ ಉಡುಗೊರೆ ರೆಡಿ
ಇನ್ನು ಕೆಲವು ಹಣ್ಣುಗಳು ಹಾಗೂ ಹೂವುಗಳ ಬೆಲೆಗಳು ಕಳೆದ ವಾರದಿಂದಲೇ ಹೆಚ್ಚಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ. ಆಯುಧಪೂಜೆಯ ಹಿನ್ನೆಲೆಯಲ್ಲಿ ಸೇವಂತಿಗೆ, ಮಾರಿಗೋಲ್ಡ್ ಹಾಗೂ ಗುಲಾಬಿಗೆ ಹೂಗಳಿಗೆ ಬೇಡಿಕೆ ಹೆಚ್ಚಾಗಿದ್ದರೂ ಗ್ರಾಹಕರು ಖರೀದಿ ಮಾಡುತ್ತಿರುವುದು ವಿಶೇಷವೆನಿಸಿದೆ.
ಮೈಸೂರು ಪ್ರಮುಖ ರಸ್ತೆಗಳು ಹಾಗೂ ದೇವರಾಜ ಮಾರುಕಟ್ಟೆಯಲ್ಲಿ ಜನಜಂಗುಳಿ ಏರ್ಪಟ್ಟಿದ್ದು, ಕಾಲಿಡಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಜೆಯ ವೇಳೆಗೆ ಖರೀದಿ ಭರಾಟೆ ಮತ್ತಷ್ಟು ಹೆಚ್ಚಾಗಲಿದ್ದು, ಮುನ್ನೆಚ್ಚರಿಕೆಯಾಗಿ ಅಲ್ಲಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.





