ಮೈಸೂರು: ಪಂಚನ್ ಲಾಮಾ ಹಾಗೂ ಎಲ್ಲ ರಾಜಕೀಯ ಕೈದಿಗಳ ಬಿಡುಗಡೆ ಆಗ್ರಹಿಸಿ ಚೀನಾ ಸರ್ಕಾರದ ವಿರುದ್ಧ ಟಿಬೆಟಿಯನ್ನರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಟಿಬೆಟನ್ ಯುವ ಕಾಂಗ್ರೆಸ್, ಮೈಸೂರು ಪ್ರಾಂತೀಯ ಟಿಬೆಟಿನ್ ಮಹಿಳಾ ಸಂಘಟಣೆ ಮತ್ತು ಬೈಲಕುಪ್ಪೆ, ಹುಣಸೂರು ಮತ್ತು ಕೊಳ್ಳೇಗಾಲ ಟಿಬೆಟಿಯನ್ ವಿದ್ಯಾರ್ಥಿ ಸಂಘದಿಂದ ನೂರಾರು ಸದಸ್ಯರು ಚೀನಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಟಿಬೆಟಿಯನ್ ಜನರ ಹಕ್ಕು ಹಾಗೂ ಭಾವನೆಗಳನ್ನು ಗೌರವಿಸಬೇಕು. ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಬೇಕು. ದಲೈ ಲಾಮಾ ಅವರ ಮಧ್ಯಸ್ಥಿಕೆಯನ್ನು ಒಪ್ಪಿಕೊಳ್ಳಬೇಕು. ಟಿಬೆಟಿಯನ್‌ನ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ ನೀತಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.