ಮೈಸೂರು: ಬೈಕ್‌ನಲ್ಲಿ ಬಂದು ವೃದ್ಧ ಮಹಿಳೆಯ ಖದೀಮನೋರ್ವ ಸರ ಎಗರಿಸಿರುವ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ಸುಮಾರು 7.30ರ ಸಮಯದಲ್ಲಿ ಈ ಘಟನೆ ನಡೆದಿದ್ದು, ಸ್ನೇಹಿತರ ಮನೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೃದ್ಧ ಮಹಿಳೆಯ ಸರ ಎಗರಿಸಿದ್ದಾನೆ.
ಕತ್ತಿನಲ್ಲಿದ್ದ ಸರವನ್ನು ರಭಸದಿಂದ ಎಳೆದ ಪರಿಣಾಮ ಚಿನ್ನದ ಸರ ಎರಡು ತುಂಡಾಗಿದೆ. ಈ ವೇಳೆ ಒಂದು ತುಂಡು ಸರವನ್ನು ಬಿಟ್ಟು, ಮತ್ತೊಂದು ತುಂಡು ಸರವನ್ನು ಕದ್ದು ಪರಾರಿಯಾಗಿದ್ದಾನೆ.
ಮಹಿಳೆ ಮನೆಯ ಬೀದಿಯಲ್ಲೇ ಕಳ್ಳ ತನ್ನ ಕೈಚಳಕ ತೋರಿಸಿದ್ದು, ಘಟನಾ ಸ್ಥಳಕ್ಕೆ ಡಿಸಿಪಿ ಮುತ್ತುರಾಜ್, ಎಸಿಪಿ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





