ಮೈಸೂರು: ಇಲ್ಲಿನ ಗಾಯತ್ರಿಪುರಂನಲ್ಲಿ ಖದೀಮನೋರ್ವ ಚಾಮುಂಡೇಶ್ವರಿ ತಾಯಿಯ ತಾಳಿ ಕದ್ದೊಯ್ದ ಘಟನೆ ನಡೆಸಿದ್ದು, ಕಳ್ಳನ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹಾಡಹಗಲೇ ಭಕ್ತನ ಸೋಗಿನಲ್ಲಿ ಬಂದು ದೇವರ ಕತ್ತಿನಲ್ಲಿದ್ದ ಮಾಂಗಲ್ಯ ಕದ್ದು ಪರಾರಿಯಾಗಿದ್ದಾನೆ. ಆಷಾಢ ಮಾಸದ ಎರಡನೇ ಶುಕ್ರವಾರಕ್ಕೆ ದೇವಸ್ಥಾನದಲ್ಲಿ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗುತ್ತಿದೆ. ದೇವಸ್ಥಾನದ ಬೀಗ ತೆರೆದು ಅರ್ಚಕರು ನೀರು ತರಲು ಹೋಗಿದ್ದ ವೇಳೆ ಕಳ್ಳತನ ನಡೆದಿದೆ.
ಖದೀಮನ ಕೈಚಳಕ ದೇವಸ್ಥಾನದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಳ್ಳನನ್ನು ಪತ್ತೆ ಹೆಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.





