ಮೈಸೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಮೇಲೆ ಇರುವ ಎಲ್ಲಾ ಆರೋಪಗಳಿಗೆ ಹಿಟ್ ಅಂಡ್ ರನ್ ರೀತಿಯಾಗಿ ಮಾತಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಎಚ್‌ಡಿಕೆ ವಿರುದ್ಧ ಇರುವ ಡಿನೋಟಿಫಿಕೇಶನ್ ಆರೋಪಕ್ಕೆ ಸಂಬಂಧಪಟ್ಟಂತೆ ಇಂದು(ಸೆ.20) ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವರು ಈಗಾಗಲೇ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ದಾಖಲೆಗಳನ್ನು ಗುರುವಾರ(ಸೆ.19) ಬಿಡುಗಡೆಗೊಳಿಸಿದ್ದಾರೆ. ಆದರೆ ನಾನಿನ್ನು ದಾಖಲೆಗಳನ್ನು ನೋಡಿಲ್ಲ ಇಂದುನೋಡುತ್ತೇನೆ. ಆ ಭೂಮಿ ಎಚ್‌ಡಿಕೆ ಅವರ ಭಾಮೈದ ಅವರ ಹೆಸರಿಗೆ ನೋಂದಣಿಯಾಗಿದೆ. ಈ ವಿಚಾರ ಬಹಳ ಗಂಭೀರವಾಗಿದೆ. ಅಲ್ಲದೆ, ಈ ವಿವಾರದಲ್ಲಿ ಹಲವರು ಜಿಪಿಎ ಮಾಡಿಸಿದ್ದಾರೆ. ಇಂದೇ ಆ ಫೈಲ್ ಅನ್ನು ಪರಿಶೀಲಿಸುತ್ತೇನೆ ಎಂದು ಹೇಳಿದರು.