ಮೈಸೂರು: “ಸ್ಟಾರ್ ಆಫ್ ಮೈಸೂರು” ಹಾಗೂ “ಮೈಸೂರು ಮಿತ್ರ” ಪತ್ರಿಕೆಗಳ ಸ್ಥಾಪಕರು ಮತ್ತು ಸಂಪಾದಕರಾದ ದಿವಂಗತ ಕೆ.ಬಿ. ಗಣಪತಿ ಅವರ ನಿವಾಸಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಕೆ.ಬಿ ಗಣಪತಿಯವರು ಪತ್ರಿಕೋದ್ಯಮ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 47 ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಇಂಗ್ಲಿಷ್ ಸಂಜೆ ದಿನಪತ್ರಿಕೆಯ ಹಿಂದಿನ ಮಾರ್ಗದರ್ಶಕ ಶಕ್ತಿಯಾಗಿ, ಸಾರ್ವಜನಿಕರ ಅಭಿಪ್ರಾಯವನ್ನು ರೂಪಿಸುವಲ್ಲಿ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮವನ್ನು ಪೋಷಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಕೆ.ಬಿ.ಗಣಪತಿ ಅವರ ನಿಧನವು ಮಾಧ್ಯಮ ಕ್ಷೇತ್ರಕ್ಕೆ ಮತ್ತು ಮೈಸೂರು ನಗರಕ್ಕೆ ದೊಡ್ಡ ನಷ್ಟವನ್ನುಂಟುಮಾಡಿದೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.





