Mysore
29
overcast clouds

Social Media

ಭಾನುವಾರ, 30 ಆಗಸ್ಟ್ 2026
Light
Dark

ಸಂಸದ ಯದುವೀರ್ ಒಡೆಯರ್ ಹುಟ್ಟುಹಬ್ಬದಂದು ‘ರಂಗೋಲಿ’ ಶುಭಾಶಯ

ಮೈಸೂರು: ಇಂದು ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನಲ್ಲಿ ಸಂಭ್ರಮ ಮನೆಮಾಡಿದೆ.

ಅರಮನೆಯ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಸಂಸದರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಯದುವೀರ್‌ ಒಡೆಯರ್‌ ಹೆಸರಿನಲ್ಲಿ ವಿಶೇಷ ಅರ್ಚನೆ ಹಾಗೂ ಪೂಜೆಗಳನ್ನು ನೆರವೇರಿಸಿದರು.

ಹುಟ್ಟುಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಕಳೆ ನೀಡುವಂತೆ ದೇವಾಲಯದ ಮುಂಭಾಗದಲ್ಲಿ ಬೃಹತ್‌ ರಂಗೋಲಿ ಚಿತ್ರವೊಂದು ಎಲ್ಲರ ಗಮನ ಸೆಳೆಯುತ್ತಿದೆ.

ಕಲಾವಿದ ಪುನೀತ್‌ ಅವರ ಕೃಚಳಕದಲ್ಲಿ ಮೂಡಿಬಂದಿರುವ ಈ ರಂಗೋಲಿ ಸುಮಾರು 8500 ಚದರ ಅಡಿಯಷ್ಟು ವಿಸ್ತಾರವಾಗಿದ್ದು, 125 ಅಡಿ ಉದ್ದ ಹಾಗೂ 65 ಅಡಿ ಅಗಲವಿದೆ.

 

 

Tags:
error: Content is protected !!