Mysore
24
clear sky

Social Media

ಶನಿವಾರ, 24 ಜನವರಿ 2026
Light
Dark

ಪ್ರಿಯಾಂಕ್ ಖರ್ಗೆ ಎಮ್ಮೆ ಮೇಲೆ ಮಳೆ ಬಂದಂತೆ ಆಡ್ತಾರೆ: ಮಾಜಿ ಸಂಸದ ಪ್ರತಾಪ್‌ ಸಿಂಹ

ಮೈಸೂರು: ಆರ್‌ಎಸ್‌ಎಸ್‌ ಬ್ಯಾನ್‌ ಮಾಡುವಂತೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್‌ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆಗೆ ಒಂದು ಹುಚ್ಚು ಚಾಳಿ ಇದೆ. ಪ್ರಿಯಾಂಕ್ ಖರ್ಗೆ ಎಮ್ಮೆ ಮೇಲೆ ಮಳೆ ಬಂದಂತೆ ಆಡ್ತಾರೆ. ಇತ್ತೀಚೆಗೆ ಪ್ರಿಯಾಂಕ್ ಖರ್ಗೆಗೆ ಪ್ರಚಾರದ ಗೀಳು ಜಾಸ್ತಿಯಾಗಿದೆ. ನಾನೊಬ್ಬ ಮಂತ್ರಿ ಎಲ್ಲವನ್ನೂ ಪ್ರಸಾರ ಮಾಡ್ತಾರೆ ಅಂತೆಲ್ಲಾ ಏನು ಬೇಕಾದ್ರೂ ಮಾತನಾಡುತ್ತಾರೆ. ಜವಾಹರ್‌ ಲಾಲ್‌ ನೆಹರೂ ಕೈನಲ್ಲಿ ಆರ್‌ಎಸ್‌ಎಸ್ ಬ್ಯಾನ್ ಮಾಡೋಕೆ ಆಗಲಿಲ್ಲ.‌ ಇಂದಿರಾಗಾಂಧಿ ಕೈನಲ್ಲಿ ಆಗಲಿಲ್ಲ. ರಾಜೀವ್ ಗಾಂಧಿ ಕೈನಲ್ಲಿ ಆಗಲಿಲ್ಲ. ನಿಮ್ಮ ಕೈನಲ್ಲಿ ಆರ್‌ಎಸ್‌ಎಸ್ ಬ್ಯಾನ್ ಮಾಡೋಕೆ ಆಗುತ್ತಾ ಎಂದು ಕಿಡಿಕಾರಿದರು.

ಇದನ್ನು ಓದಿ : ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿದ ಬೆನ್ನಲ್ಲೇ ಬಿಗ್‌ ಶಾಕ್:‌ ಏನದು ಗೊತ್ತಾ?

ಇನ್ನು ಸಚಿವ ಪ್ರಿಯಾಂಕ್‌ ಖರ್ಗೆ ಅವರೇ ನಿಮಗೆ ರಾಜ್ಯದಲ್ಲಿ ಯಾವುದೇ ಮನ್ನಣೆ ಇಲ್ಲ. ಕಲಬುರಗಿ ಅಭಿವೃದ್ಧಿ ಮಾಡಲು ಆಗದ ನೀವು ಎಷ್ಟು ಮಾತನಾಡುತ್ತೀರಾ? ಮೊನ್ನೆ ಕಲಬುರ್ಗಿ ಹೆಣ್ಣು ಮಗು ಹತ್ಯೆ ಆಯ್ತು, ಅದರ ಬಗ್ಗೆ ಮಾತನಾಡಿಲ್ಲ. ಅದೆಷ್ಟೋ ಜನರು ನಮಗೆ ಕಲಬುರ್ಗಿಯಲ್ಲಿ ಆಧಾರ್ ಕಾರ್ಡ್ ಸಿಗ್ತಾ ಇಲ್ಲ ಅಂತಾರೆ. ಅದರ ಬಗ್ಗೆಯೂ ಎಲ್ಲೂ ಮಾತಾಡಿಲ್ಲ. ಅಧಿಕಾರಕ್ಕೆ ಬರುವ ಮೊದಲು, ಬಿಟ್ ಕಾಯಿನ್ ಹಗರಣದ ಬಗ್ಗೆ ಏನೆಲ್ಲಾ ಮಾತನಾಡಿದರು? ಈಗ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ನೀವು ಕೂಡ ಪಿಯುಸಿ ಫೇಲ್ ಆಗಿರೋರು. ನಿಮ್ಮ ಜಿಲ್ಲೆ ಎಸ್‌ಎಸ್‌ಎಲ್‌ಸಿ ರಿಸಲ್ಟ್ ನಲ್ಲಿ ಕೋಣೆಯಲ್ಲಿ ಇರುತ್ತೆ. ಸಚಿವರಾಗಿ ನಿಮ್ಮ ಜಿಲ್ಲೆಗೆ ಕೊಡುಗೆ ಏನು ಸರ್? ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ನೀವು ಏನು ಬದಲಾವಣೆ ತಂದಿದ್ದೀರಾ? ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.

Tags:
error: Content is protected !!