Mysore
15
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಕಾಂತಾರ ಸಿನಿಮಾ ತೋರಿಸಲು ಇಡೀ ಥಿಯೇಟರ್‌ ಬುಕ್‌ ಮಾಡಿದ ಪ್ರತಾಪ್‌ ಸಿಂಹ: ಯಾರ್ಯಾರಿಗೆ ಅವಕಾಶ ಗೊತ್ತಾ?

ಮೈಸೂರು: ಕಾಂತಾರ ಚಾಪ್ಟರ್‌ 1 ಸಿನಿಮಾ ವೀಕ್ಷಣೆಗೆ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ಇಡೀ ಥಿಯೇಟರ್‌ ಬುಕ್‌ ಮಾಡಿದ್ದಾರೆ.

ನಾಳೆ ಸಂಜೆ 4 ಗಂಟೆಗೆ ಬಿಜೆಪಿ ಕಾರ್ಯಕರ್ತರನ್ನೆಲ್ಲಾ ಒಡಗೂಡಿ ಕಾಂತಾರ 2 ನೋಡೋಣ. ಡಿಆರ್‌ಸಿಯಲ್ಲಿ ಫುಲ್‌ ಸ್ಕ್ರೀನ್‌ ಬುಕ್‌ ಮಾಡಿದ್ದೇನೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪ್ರತಾಪ್‌ ಸಿಂಹ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ:-ಜಾತಿಗಣತಿ ಸಮೀಕ್ಷೆ: ಕುಟುಂಬದ ಮಾಹಿತಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌

ಒಟ್ಟು 197 ಟಿಕೆಟ್‌ಗೆ ಪ್ರತಾಪ್‌ ಸಿಂಹ 68,920 ರೂ ಪಾವತಿಸಿ ಥಿಯೇಟರ್‌ ಬುಕ್‌ ಮಾಡಿದ್ದಾರೆ. ಮೈಸೂರಿನ ಬಿಜೆಪಿ ಕಾರ್ಯಕರ್ತರಿಗಾಗಿ ಮೈಸೂರಿನ ಡಿಆರ್‌ಸಿ ಥಿಯೇಟರ್‌ನಲ್ಲಿ ಕಾಂತಾರ 1 ಟಿಕೆಟ್‌ ಬುಕ್‌ ಮಾಡಿದ್ದಾರೆ.

ನಾಳೆ ಸಂಜೆ 4 ಗಂಟೆಗೆ ಸಿನಿಮಾ ಪ್ರದರ್ಶನವಿದ್ದು, ಡಿಆರ್‌ಸಿಯಲ್ಲಿ ಕಾರ್ಯಕರ್ತರೆಲ್ಲಾ ಸೇರಿ ಕಾಂತಾರ ಸಿನಿಮಾ ನೋಡೋಣ ಎಂದು ಟ್ವೀಟ್‌ ಮಾಡಿದ್ದಾರೆ.

Tags:
error: Content is protected !!