Mysore
15
few clouds

Social Media

ಗುರುವಾರ, 22 ಜನವರಿ 2026
Light
Dark

ಮೈಸೂರಿನ ಈ ಪ್ರದೇಶಗಳಲ್ಲಿ ನ.23 ರಂದು ವಿದ್ಯುತ್‌ ವ್ಯತ್ಯಯ

ಮೈಸೂರು : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ವಿವಿ ಮೊಹಲ್ಲಾ ವಿಭಾಗ ವ್ಯಾಪ್ತಿಯ 66/11 ಕೆವಿ ಹೆಬ್ಬಾಳ್ ವಿದ್ಯುತ್ ವಿತರಣಾ ಕೇಂದ್ರ ಹಾಗೂ 66/11 ಕೆವಿ ಮೇಟಗಳ್ಳಿ ವಿದ್ಯುತ್ ವಿತರಣಾ ಕೇಂದ್ರ ವಿದ್ಯುತ್ ವಿತರಣಾ ಕೇಂದ್ರಗಳ ನಿರ್ವಹಣಾ ಕೆಲಸದ ನಿಮಿತ್ತ ನ.23ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

66/11 ಕೆವಿ ಹೆಬ್ಬಾಳ್ ವಿದ್ಯುತ್ ವಿತರಣಾ ಕೇಂದ್ರ:
ಹೆಬ್ಬಾಳ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಕುಂಬಾರ ಕೊಪ್ಪಲು, ಟೋಲ್‌ಗೇಟ್, ವಾಣಿವಿಲಾಸ ಲೇಔಟ್, ಮಹದೇಶ್ವರ ಬಡಾವಣೆ, ಸುಭಾಷ್ ನಗರ, ಸೂರ್ಯಬೇಕರಿ, ವಿಜಯನಗರ, ರೈಲ್ವೆ ಲೇಔಟ್, ಅಭಿಷೇಕ್ ವೃತ್ತ, ಮಾದೇಗೌಡ ವೃತ್ತ, ಎಂಜಿ ಕೊಪ್ಪಲು, ಹೊರ ವರ್ತುಲ ರಸ್ತೆ, ಹಂಪಿ ವೃತ್ತ, ಸಂಗಮ್ ವೃತ್ತ, ಪುರಾತತ್ವ ಕಚೇರಿ ಸುತ್ತಮುತ್ತ, ಕೆಐಎಡಿಬಿ ಕೈಗಾರಿಕಾ ಹೌಸಿಂಗ್ ಲೇಔಟ್, ಎಲ್-ಟಿ -ಕ್ಟರಿ ಸುತ್ತಮುತ್ತಲಿನ ಪ್ರದೇಶ, ರಾಣೆ ಮದ್ರಾಸ್ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಜೆ.ಕೆ.ಟೈರ್ಸ್, ಮೈಸೂರು ಸ್ಟೀಲ್ಸ್ ಇಎಚ್‌ಟಿ ಬಳಕೆದಾರರಿಗೆ.

ಇದನ್ನೂ ಓದಿ:-ಸಮಾಜದ ನೆರವು ಪಡೆದವರು ದೇಣಿಗೆ ನೀಡಿ ಋಣ ತೀರಿಸಿ : ಸಿಎಂ ಸಿದ್ದರಾಮಯ್ಯ

66/11 ಕೆವಿ ಮೇಟಗಳ್ಳಿ ವಿದ್ಯುತ್ ವಿತರಣಾ ಕೇಂದ್ರ:
ಹೆಬ್ಬಾಳ್ ಕೈಗಾರಿಕಾ ಪ್ರದೇಶ, ಮೇಟಗಳ್ಳಿ, ಬೃಂದಾವನ ಬಡಾವಣೆ, ಲೋಕನಾಯಕ ನಗರ, ಜಯದೇವ ನಗರ, ಬಿಎಂಶ್ರೀ ನಗರ, ಹೆಬ್ಬಾಳ್ ಹೊರ ವರ್ತುಲ ರಸ್ತೆ, ಎಚ್‌ಪಿಸಿಎಲ್ ಗ್ಯಾಸ್ ಪ್ಲಾಂಟ್ಸ್ ಸುತ್ತಮುತ್ತ, ಹೆಬ್ಬಾಳ್ ೧ನೇ, ೨ನೇ ಹಾಗೂ ೩ನೇ ಹಂತ, ಸುಬ್ರಹ್ಮಣ್ಯ ನಗರ, ಬಸವನಗುಡಿ, ಎಸ್‌ಬಿಎಂ ಬ್ಯಾಂಕ್ ಸುತ್ತಮುತ್ತ, ಹೆಬ್ಬಾಳ್ ಕಾಲೋನಿ, ಹೆಬ್ಬಾಳ್ ಮುಖ್ಯರಸ್ತೆ, ಲಕ್ಷ್ಮೀಕಾಂತನಗರ, ಸಂಕ್ರಾಂತಿ ವೃತ್ತ, ಗೋಲ್ಡನ್ ಬೇಕರಿ, ಕೆಐಎಡಿಬಿ ಲೇಔಟ್, ಮಯೂರ ವೃತ್ತ, ಕಾವೇರಿ ವೃತ್ತ, ಮಿಲಿಟರಿ ಕ್ವಾರ್ಟರ್ಸ್, ಆರ್‌ಬಿಐ, ವಿಕ್ರಾಂತ್ ಮೇನ್ ಪ್ಲಾಂಟ್ಸ್ ಮತ್ತು ಶಿವಮೊಗ್ಗ ಸ್ಟೀಲ್ಸ್ ಸುತ್ತಮುತ್ತಲಿನ ಪ್ರದೇಶಗಳು, ಬೆಳಗೊಳ ಕೈಗಾರಿಕಾ ಪ್ರದೇಶ, ಕೆಆರ್‌ಎಸ್ ರಸ್ತೆ, ಭೈರವೇಶ್ವರ ನಗರ, ಬಸವೇಶ್ವರ ನಗರ, ಮೇಟಗಳ್ಳಿ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಸೆಸ್ಕ್ ವಿ.ವಿ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:
error: Content is protected !!