Mysore
29
scattered clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಮೈಸೂರಿನಲ್ಲಿರುವ ಪೆಟ್ರೋಲ್ ಡಿಪೋ ಸ್ಥಳಾಂತರಕ್ಕೆ ವಿರೋಧ: ಪೆಟ್ರೋಲಿಯಂ ಡೀಲರ್ಸ್ ಪ್ರತಿಭಟನೆ

Petroleum dealers protest

ಮೈಸೂರು: ಮೈಸೂರಿನಲ್ಲಿರುವ ಪೆಟ್ರೋಲ್ ಡಿಪೋ ಸ್ಥಳಾಂತರಕ್ಕೆ ಮುಂದಾದ ಇಂಡಿಯನ್ ಆಯಿಲ್ ಕಂಪನಿ ವಿರುದ್ಧ ಮೈಸೂರು ಪೆಟ್ರೋಲಿಯಂ ಡೀಲರ್ಸ್ ವಿರೋಧ ವ್ಯಕ್ತಪಡಿಸಿದ್ದಾರೆ.

ಕಳೆದ 65 ವರ್ಷಗಳಿಂದ ಮೈಸೂರಿನಲ್ಲಿರುವ ಪೆಟ್ರೋಲ್‌ ಡಿಪೋವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲು ಯತ್ನಿಸಲಾಗಿದ್ದು, ಇದಕ್ಕೆ ಮೈಸೂರು ಪೆಟ್ರೋಲಿಯಂ ಡೀಲರ್ಸ್ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲೇ ಡಿಪೋ ಉಳಿಸುವಂತೆ ಆಗ್ರಹಿಸಿ ಫೆಡರೇಶನ್ ಆಫ್ ಮೈಸೂರು ಪೆಟ್ರೋಲಿಯಂ ಟ್ರೇಡರ್ಸ್ ಸಂಘಟನೆ ವತಿಯಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುತ್ತಿದೆ.

ಪ್ರತಿಭಟನಾ ಸ್ಥಳಕ್ಕೆ ಇಂಡಿಯನ್ ಪೆಟ್ರೋಲಿಯಂ ವಿಭಾಗೀಯ ಅಧಿಕಾರಿ ಡಿಎಂಓ ಮದನೇಶ್ವರನ್ ಭೇಟಿ ನೀಡಿ ಡೀಲರ್ಸ್‌ಗಳ ಜೊತೆ ಚರ್ಚೆ ನಡೆಸಿದರು. ಈ ವೇಳೆ ಯಾವುದೇ ಕಾರಣಕ್ಕೂ ಪೆಟ್ರೋಲ್ ಡಿಪೋ ಸ್ಥಳಾಂತರ ಮಾಡಬಾರದು. ಒಂದು ವೇಳೆ ಸ್ಥಳಾಂತರ ಮಾಡಿದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Tags:
error: Content is protected !!