Mysore
23
scattered clouds

Social Media

ಶನಿವಾರ, 31 ಜನವರಿ 2026
Light
Dark

ಔಟ್‌ಲುಕ್‌ ಐಕೇರ್‌ ರ‍್ಯಾಂಕಿಂಗ್ಸ್‌ : ಮೈಸೂರು ವಿಶ್ವವಿದ್ಯಾನಿಲಯಕ್ಕೆ 8ನೇ ಸ್ಥಾನ

mysore university

ಮೈಸೂರು : ಔಟ್‌ಲುಕ್ ಐಕೇರ್ ರ‍್ಯಾಂಕಿಂಗ್ಸ್-2025ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು 8ನೇ ಸ್ಥಾನ ಪಡೆದಿದೆ ಎಂದು ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ತಿಳಿಸಿದ್ದಾರೆ.

ಔಟ್‌ಲುಕ್ ನಿಯತ ಕಾಲಿಕೆಯು ಶೈಕ್ಷಣಿಕ ಮತ್ತು ಸಂಶೋಧನಾ ಉತ್ಕೃಷ್ಟತೆ, ಉದ್ದಿಮೆ ಸಹಯೋಗ ಮತ್ತು ಉದ್ಯೋಗಾವಕಾಶ, ಮೂಲಭೂತ ಸೌಕರ್ಯ ಮತ್ತು ಸವಲತ್ತು, ಆಡಳಿತ ಮತ್ತು ವಿಸ್ತರಣಾ ಚಟುವಟಿಕೆ ಹಾಗೂ ವೈವಿಧ್ಯತೆ ಮತ್ತು ವ್ಯಾಪ್ತಿ ಈ ಐದು ಪ್ರಧಾನ ಅಂಶಗಳನ್ನು ಆಧರಿಸಿ ರ‍್ಯಾಂಕಿಂಗ್ ನೀಡುತ್ತದೆ. ದೇಶದ 75 ಅತ್ಯುತ್ತಮ ರಾಜ್ಯ ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಪೈಕಿ ಮೈಸೂರು ವಿವಿಗೆ ಈ 8ನೇ ರ‍್ಯಾಂಕಿಂಗ್ ನೀಡಿದೆ ಎಂದು ಅವರು ಹೇಳಿದ್ದಾರೆ.

ಖಾಯಂ ಅಧ್ಯಾಪಕರುಗಳ ಕೊರತೆ ಹಾಗೂ ಇನ್ನಿತರ ಮಿತಿಗಳ ನಡುವೆಯೂ ಮೈಸೂರು ವಿವಿಯು 8ನೇ ಸ್ಥಾನ ಪಡೆದಿರುವುದು ಅಭಿಮಾನದ ಸಂಗತಿಯಾಗಿದೆ. ಇಡೀ ವಿಶ್ವವಿದ್ಯಾನಿಲಯದ ದತ್ತಾಂಶ ಮತ್ತು ದಾಖಲೆಗಳನ್ನು ನಿಖರವಾಗಿ ಹಾಗೂ ಸಮರ್ಪಕವಾಗಿ ಬಿಂಬಿಸಿದ ವಿಶ್ವವಿದ್ಯಾನಿಲಯದ ಆಂತರಿಕ ಗುಣಮಟ್ಟ ಖಾತರಿ ಘಟಕದ (ಐ.ಕ್ಯು.ಎ.ಸಿ) ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಪರಿಶ್ರಮ ಬಹು ಶ್ಲಾಘನೀಯವಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದ ಈ ಯಶಸ್ಸಿಗೆ ಕಾರಣಕರ್ತರಾದ ಸಿಂಡಿಕೇಟ್ ಹಾಗೂ ಶೈಕ್ಷಣಿಕ ಮಂಡಳಿಯ ಸದಸ್ಯರು, ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು, ಅಧಿಕಾರಿಗಳು, ಆಡಳಿತಾತ್ಮಕ ಸಿಬ್ಬಂದಿ ಹಾಗೂ ಪೋಷಕರನ್ನು ಈ ಸಂದರ್ಭದಲ್ಲಿ ಅಭಿನಂದಿಸುವುದಾಗಿ ಕುಲಪತಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:
error: Content is protected !!