ಮೈಸೂರು: ಮುಂದಿನ ನಾಯಕ ಜಾರಕಿಹೊಳಿ ಎಂಬ ಎಂಎಲ್‌ಸಿ ಯತೀಂದ್ರ ಹೇಳಿಕೆಗೆ ಮೈಸೂರು ಕಾಂಗ್ರೆಸ್ ಅಪಸ್ವರ ಉಂಟಾಗಿದೆ.
ಈ ಮೂಲಕ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಮೊದಲ ಬಾರಿಗೆ ತವರೂರಿನಲ್ಲಿ ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗಿದ್ದಾರೆ. ಮುಂದಿನ ಸಿಎಂ ಯಾರು ಎಂದು ತೀರ್ಮಾನ ಮಾಡೋದು ಹೈಕಮಾಂಡ್ ಹೊರತು ಬೇರೆ ಯಾರು ಅಲ್ಲ. ಯತೀಂದ್ರ ಅವರು ಈ ರೀತಿ ಬಹಿರಂಗ ಹೇಳಿಕೆ ನೀಡಬಾರದು.
ಇದನ್ನು ಓದಿ: ನಮ್ಮ ತಂದೆ ರಾಜಕೀಯ ಕೊನೆಗಾಲದಲ್ಲಿದ್ದಾರೆ: ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ
ಈ ರೀತಿ ಹೇಳಿಕೆಯಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ಯತೀಂದ್ರ ನಮ್ಮಂತೆಯೇ ಒಬ್ಬ ಕಾರ್ಯಕರ್ತರು. ಈ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು. ಪಕ್ಷಕ್ಕಾಗಿ ಡಿ.ಕೆ.ಶಿವಕುಮಾರ್ ಸೇವೆ ಬಹಳಷ್ಟು ಇದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗ್ಬೇಕು ಅನ್ನೋದು ಕಾಂಗ್ರೆಸ್ ಕಾರ್ಯಕರ್ತರ ಬಯಕೆಯಾಗಿದೆ. ಯತೀಂದ್ರ ಅವರ ಇಂತಹಾ ಹೇಳಿಕೆಯಿಂದ ವಿರೋಧ ಪಕ್ಷಗಳಿಗೆ ನಾವೇ ಅಹಾರ ಕೊಟ್ಟಂತಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಶ್ರೀನಿವಾಸ್ ಅವರು ಪರೋಕ್ಷವಾಗಿ ಯತೀಂದ್ರ ವಿರುದ್ಧ ತಿರುಗಿಬಿದ್ದಿದ್ದಾರೆ.





