ಮೈಸೂರು: ಕರ್ನಾಟಕ ರಾಜ್ಯದಿಂದ ಒಂದು ಇಂಡಸ್ಟ್ರೀಸ್ ಕೂಡ ಹೊರಗೆ ಹೋಗುವುದಿಲ್ಲ ಎಂದು ಬೃಹತ್ ಹಾಗೂ ಸಣ್ಣ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಗೂಗಲ್ ಕಂಪನಿ ಆಂಧ್ರಕ್ಕೆ ಸ್ಥಳಾಂತರವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜ್ಯದಿಂದ ಯಾವುದೇ ಕಂಪನಿ ಹೊರಗಡೆ ಹೋಗಿಲ್ಲ. ಚಂದ್ರಬಾಬು ನಾಯ್ಡು ಅವರಿಂದಲೇ ಕೇಂದ್ರ ಸರ್ಕಾರ ನಡೆಯುತ್ತಿದೆ. ಈ ಕಾರಣಕ್ಕೆ ಗೂಗಲ್ ಅಂಧ್ರಕ್ಕೆ ಹೋಗಿದೆ. ಇಂಡಸ್ಟ್ರೀಸ್ ಕರ್ನಾಟಕ ಬಿಟ್ಟು ಹೋಗಿಲ್ಲ. ಎಐ ಆಂಧ್ರಕ್ಕೆ ಹೋಗಿದ್ದು ಕೇಂದ್ರ ಸರ್ಕಾರದಿಂದ. ಕರ್ನಾಟಕ ರಾಜ್ಯದಿಂದ ಒಂದು ಇಂಡಸ್ಟ್ರೀಸ್ ಹೊರಗೆ ಹೋಗುವುದಿಲ್ಲ. ಹೊಸ ಹೊಸ ಇಂಡಸ್ಟ್ರಿಗಳು ಬೇರೆ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬರುತ್ತದೆ ಎಂದು ಹೇಳಿದರು.





