Mysore
25
scattered clouds

Social Media

ಮಂಗಳವಾರ, 18 ಆಗಸ್ಟ್ 2026
Light
Dark

ಸಚಿವ ಎನ್.ಎಸ್ ಬೋಸರಾಜುರಿಂದ ಪ್ರಗತಿ ಪರಿಶೀಲನಾ ಸಭೆ

ಮೈಸೂರು : ಇಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜುರಿಂದ ಸಣ್ಣ ನೀರಾವರಿ ಇಲಾಖೆಯ ಮೈಸೂರು ವೃತ್ತದ ವ್ಯಾಪ್ತಿಗೆ ಸಂಬಂಧಿಸಿದಂತೆ  ಪ್ರಗತಿ ಪರಿಶೀಲನಾ ಸಭೆ  ನಡೆಸಲಾಯಿತು. ಸಭೆಯಲ್ಲಿ ಸಚಿವರು ಹಲವಾರು ವಿಚಾರಗಳ ಬಗ್ಗೆಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ದಕ್ಷಿಣ ವಲಯದ  ಮುಖ್ಯ ಅಭಿಯಂತರರಾದ ರಾಘವನ್ ಸೇರಿದಂತೆ ಎಲ್ಲಾ ವಲಯಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸಚಿವ ಎನ್.ಎಸ್ ಬೋಸರಾಜ್ ಗೆ ಹೂ ಗುಚ್ಚ ನೀಡಿ ಅಭಿನಂದನೆ

ಜಲದರ್ಶಿನಿ ಅತಿಥಿ ಗೃಹದಲ್ಲಿ ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಅವರು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜ್ ಗೆ ಹೂ ಗುಚ್ಚ ನೀಡಿ ಅಭಿನಂದಿಸಿದರು.

ಈ ಸಂದರ್ಭ ಶಾಸಕ ಎ.ಆರ್. ಕೃಷ್ಣಮೂರ್ತಿ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ. ಜೆ. ವಿಜಯ ಕುಮಾರ್, ಮಾಜಿ ಮೇಯರ್ ಬಿ. ಕೆ. ಪ್ರಕಾಶ್, ಪಕ್ಷದ ಮುಖಂಡರುಗಳಾದ ಭಾಸ್ಕರ್ ಎಲ್ ಗೌಡ, ಎನ್.ಎಸ್. ಗೋಪಿನಾಥ್ ಮುಂತಾದವರನ್ನು ಉಪಸ್ಥಿತರಿದ್ದರು..

Tags:
error: Content is protected !!