ಮೈಸೂರು: ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸ್ನೇಹಿತನ ತಲೆ ಮೇಲೆ ಕಲ್ಲುಚಪ್ಪಡಿ ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಮೈಸೂರಿನ ಹಳೆ ಕೆಸರೆಯಲ್ಲಿ ನಡೆದಿದೆ.
ನವೀನ್ ಕುಮಾರ್ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾನೆ. ಚಂದ್ರಶೇಖರ್ ಹಾಗೂ ಭರತ್ ಎಂಬುವವರ ವಿರುದ್ಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೀನ್ ಕುಮಾರ್, ಚಂದ್ರಶೇಖರ್ ಹಾಗೂ ಭರತ್ ಮೂವರು ಸೇರಿ ಎಣ್ಣೆ ಪಾರ್ಟಿ ನಡೆಸುತ್ತಿದ್ದರು. ಈ ವೇಳೆ ಚಂದ್ರಶೇಖರ್ ಪತ್ನಿ ಬಗ್ಗೆ ನವೀನ್ ಕುಮಾರ್ ಕೆಟ್ಟ ಪದ ಬಳಕೆ ಮಾಡಿದ್ದಾನೆ ಎನ್ನಲಾಗಿದೆ.
ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಚಂದ್ರಶೇಖರ್ ಸಮೀಪದಲ್ಲಿದ್ದ ಕಲ್ಲುಚಪ್ಪಡಿಯನ್ನು ನವೀನ್ ಕುಮಾರ್ ತಲೆ ಮೇಲೆ ಹಾಕಿ ಕೊಲೆ ಮಾಡಿದ್ದಾನೆ.





