Mysore
14
clear sky

Social Media

ಗುರುವಾರ, 25 ಡಿಸೆಂಬರ್ 2025
Light
Dark

ಮೈಸೂರು ವಿ.ವಿ | ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತಸೌಕರ್ಯ ಮರಿಚಿಕೆಯಾಗಿದೆ ಎಂದು ಆರೋಪಿಸಿ ಸಂಶೋಧಕರು ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟವು ಪ್ರತಿಭಟನೆ ನಡೆಸಿತು.

ವಿ.ವಿಯ ಪಿ.ಜಿ ಹಾಸ್ಟಲ್‌ ಬಳಿ ಬುಧವಾರ ಪ್ರತಿಭಟನೆಗೆ ಕೂತ ವಿದ್ಯಾರ್ಥಿಗಳು, ಕುಡಿಯುವ ನೀರಿನ ಫಿಲ್ಟರ್ ವಾಟರ್ ಮತ್ತು ಬಿಸಿ ನೀರಿನ ಗೀಜರ್ ವ್ಯವಸ್ಥೆಯನ್ನು ಯು.ಜಿ ಮತ್ತು ಪಿ.ಜಿಯ ಪುರುಷ ಮತ್ತು ಮಹಿಳಾ ನಿಲಯಗಳಿಗೆ ಒದಗಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕಾಗಮಿಸಿದ ಮೈ ವಿ.ವಿ ಮುಖ್ಯ ಅಭಿಯಂತಕರು ಪ್ರತಿಭಟನಾಕಾರರ ಆಹವಾಲನ್ನು ಸ್ವೀಕರಿಸಿ ಕೂಡಲೇ ಎರಡೇ ದಿನದಲ್ಲಿ ನಿಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಶಾಂತಿಯಿಂದ ಪ್ರತಿಭಟನೆಯನ್ನು ಕೈಬಿಟ್ಟರು.

ಇದನ್ನೂ ಓದಿ:-ಕೆ.ಆರ್.ನಗರ | ಗಾಂಜಾ ಮಾರಾಟ : ಇಬ್ಬರ ಬಂಧನ

ಸಂಶೋಧಕ ಶಿವಶಂಕರ್, ವಿದ್ಯಾರ್ಥಿ ಮುಖಂಡ ಕೃಷ್ಣಮೂರ್ತಿ ಗಣಿಗನೂರು, ಯುವ ಹೋರಾಟಗಾರ ಹಾಗು ಸಂಶೋಧಕರದ ಪ್ರದೀಪ್ ಮುಮ್ಮಡಿ, ಮಹೇಶ್ ಪಿ.ಮರಳ್ಳಿ, ಸಂದೇಶ್ ಮನಗಳ್ಳಿ, ಕಾರ್ತಿಕ್ ತಗಡೂರು, ಪ್ರೀತಮ್ ಅಂಚಿಪುರ, ರವಿಕುಮಾರ್ ಮುಡಿಗುಂಡ, ಸಿದ್ದಾರ್ಥ್, ಅವಿನಾಶ್.ಜಿ, ಕೆ.ಎನ್.ಕವಿರಾಜ್, ಧೀರಾಜ್, ಬಾಬು ಹಾಗು ಡಿ.ಎಸ್.ಎಫ್ ಮಾಜಿ ಕಾರ್ಯದರ್ಶಿ ಗೌತಮ್ ಕೋಟೆ ಮತ್ತು ತೇಜಸ್ ಮೋಹನ್ ದಾಸ್ ಮತ್ತಿತರ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಪ್ರತಿಭಟನೆಯಲ್ಲಿದ್ದರು.

Tags:
error: Content is protected !!