ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಕ್ರಾಫಡ್ ಭವನದಲ್ಲಿ ಶನಿವಾರ ನಡೆದ 105ನೇ ಘಟಿಕೋತ್ಸವದಲ್ಲಿ ಪುರಾತತ್ವ ವಿಷಯದ ಸಂಶೋಧಕ ಶಾಂತರಾಜು.ಎಂ ಅವರಿಗೆ ಪಿಎಚ್.ಡಿ ಪದವಿ ಪ್ರಧಾನ ಮಾಡಲಾಯಿತು.
ವಿವಿ ಕುಲಪತಿ ಪ್ರೊ.ಎನ್.ಕೆ ಲೋಕನಾಥ್ ಅವರು ಪದವಿ ಪ್ರಧಾನ ಮಾಡಿದರು. ಅಖಿಲ ಭಾರತ ವೈದ್ಯಕೀಯ ವಿಜ್ಞನಗಳ ಸಂಸ್ಥೆಯ ನಿರ್ದೇಶಕ ಪ್ರೊ.ಟಿ.ಪಿ ಸಿಂಗ್, ಕುಲಸಚಿವೆ ವಿ.ಆರ್ ಶೈಲಜಾ, ಪ್ರೊ. ಎನ್.ನಾಗರಾಜ್ ಪಾಲ್ಗೊಂಡಿದ್ದರು.
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಮುಡಿಗುಂಡ ನಿವಾಸಿಯಾದ ಶಾಂತರಾಜು .ಎಂ ಅವರು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಧ್ಯಾಪಕರಾದ ಡಾ. ಶೋಭಾ ವಿ ಅವರ ಮಾರ್ಗದರ್ಶನ ಪಡೆದಿದ್ದಾರೆ. “ಚಾಮರಾಜನಗರ ಜಿಲ್ಲೆಯ ಬೃಹತ್ ಶಿಲಾಯುಗ ಸಂಸ್ಕೃತಿ” ಎಂಬ ವಿಷಯದ ಬಗ್ಗೆ ಸಂಶೋಧನಾ ಮಹಾಪ್ರಬಂಧ ನಡೆಸಿದ್ದರು.
ಈ ಮಹಾಪ್ರಬಂದವನ್ನು ಕನ್ನಡದಲ್ಲೇ ಸಿದ್ಧಪಡಿಸಿದ್ದೇನೆ. ಮುಂದೆ ಶಿಕ್ಷಕನಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬ ಗುರಿ ಇದೆ ಎಂದು ಶಾಂತರಾಜು ತಿಳಿಸಿದರು.