ಮೈಸೂರು : ಪಬ್‌ನಲ್ಲಿ ನಡೆದ ಗಲಾಟೆ ಪರಿಣಾಮ ಓರ್ವ ಯುವಕ ಕೊಲೆಯಾಗಿರುವ ಘಟನೆ ಮೈಸೂರಿನ ವಿಜಯನಗರದ ಎರಡನೇ ಹಂತದ ರೆಸ್ಟೋರೆಂಟ್‌ನಲ್ಲಿ ತಡರಾತ್ರಿ ನಡೆದಿದೆ.
ಗೋಕುಲಂ ನಿವಾಸಿ ನಿಶಾಂತ್ (32) ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದು, ಟ್ಯಾಂಕ್ ರಾಕಿ ಸಹಚರರು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಪಬ್‌ನಲ್ಲಿ ಪಾರ್ಟಿ ಮುಗಿಸಿ ಹೊರಬರುವಾಗ ಘಟನೆ ನಡೆದಿದೆ. ಮೃತ ನಿಶಾಂತ್ ಜತೆ ಸಂದೀಪ್, ದೀಕ್ಷಿತ್ ಮೂವರು ಸ್ನೇಹಿತರಿಂದ ಪಬ್‌ನಲ್ಲಿ ಪಾರ್ಟಿ ನಡೆದಿದ್ದು, ಪಾರ್ಟಿ ಮಾಡಿ ಹೊರ ಬರುವ ವೇಳೆ
ಕ್ಷುಲ್ಲಕ ವಿಚಾರಕ್ಕೆ ನಿಶಾಂತ್ ಸ್ನೇಹಿತರು ಹಾಗೂ ಟ್ಯಾಂಕ್ ರಾಕಿ ಸಹಚರರ ನಡುವೆ ಗಲಾಟೆ ನಡೆದಿದೆ.
ಇದೇ ವೇಳೆ ಪಬ್‌ನ ಎರಡನೇ ಮಹಡಿಯಿಂದ ನಿಶಾಂತ್‌ನನ್ನು ತಳ್ಳಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಎಸ್ಕೇಪ್ ಆಗಿರುವ ಆರೋಪಿಗಳಿಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




