ಮೈಸೂರು: ಇಲ್ಲಿನ ಜ್ಯೋತಿನಗರದ ಡಿಆರ್ ಮೈದಾನದಲ್ಲಿಂದು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಸ್ವತ್ತನ್ನು ಮಾಲೀಕರಿಗೆ ಹಿಂದಿರುಗಿಸಿದರು.
ಮೈಸೂರು ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ತೀವ್ರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಖದೀಮರನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿಂದು ಮೈಸೂರಿನ ಜ್ಯೋತಿನಗರದ ಡಿಆರ್ ಮೈದಾನದಲ್ಲಿಂದು ಮಾಲೀಕರಿಗೆ ಅವರವರ ಸ್ವತ್ತನ್ನು ಹಿಂದಿರುಗಿಸಲಾಯಿತು.
ಈ ಬಗ್ಗೆ ಮಾಹಿತಿ ನೀಡಿದ ಎಸಿ ವಿಷ್ಣುವರ್ಧನ್ ಅವರು, 06 ಸುಲಿಗೆ, 06 ಸರಗಳ್ಳತನ, 25 ಮನೆ ಕಳ್ಳತನ, 6 ಸರ್ವೆಂಟ್ ಕಳ್ಳತನ, 67 ವಾಹನ ಕಳ್ಳತನ, 15 ಸಾಮಾನ್ಯ ಕಳ್ಳತನ, 5 ಜಾನುವಾರು ಕಳ್ಳತನ, 4 ವಂಚನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಒಟ್ಟು 2,06,85,504 ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಹಿನ್ನೆಲೆಯಲ್ಲಿ ಇಂದು ಒಟ್ಟು 35 ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ 2 ಕೆಜಿ 439 ಗ್ರಾಂ ಚಿನ್ನ, 4 ಕೆಜಿ 360 ಬೆಳ್ಳಿ ಹಾಗೂ 18 ಪ್ರಕರಣದಲ್ಲಿ 42,36,585 ರೂಪಾಯಿ ನಗದನ್ನು ಹಿಂದಿರುಗಿಸಲಾಯಿತು ಎಂದು ಮಾಹಿತಿ ನೀಡಿದರು.
ಇನ್ನು 67 ಪ್ರಕರಣದಲ್ಲಿ ಒಟ್ಟು 05 ಕಾರು, 03 ಆಟೋ, 02, ಟ್ರಾಕ್ಟರ್, 03 ಟಿಪ್ಪರ್, 03 ರೋಡ್ ರೋಲರ್, 62 ಮೊಟರ್, 06 ಹಸುಗಳು, 03 ಕುರಿಗಳನ್ನು ಬಂಧಿತ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.