ಮೈಸೂರು : ಪೊಲೀಸ್ ಪೇದೆ ಒಬ್ಬರು ಪೇಪರ್ ಗ್ಲಾಸ್ ಹಾಗೂ ಜ್ಯೂಸ್ ತಯಾರಿಕಾ ಘಟಕ ಆರಂಭಿಸುವುದಾಗಿ ಹೇಳಿ ಸ್ನೇಹಿತರಿಂದ 35 ಲಕ್ಷ ರೂ. ಹಣ ಪಡೆದು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಪೇದೆ ರಾಜು ಎಂಬಾತನ ವಿರುದ್ಧ ಕುವೆಂಪುನಗರ ನಿವಾಸಿ ಮಂಜುಳಾ ಜೈನ್, ಸಿದ್ದೇಶ್ ಹಾಗೂ ಮಹಾಲಕ್ಷಿ ಎಂಬವರು ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನು ಓದಿ: ವೈಜ್ಞಾನಿಕ ಹಾಗೂ ವೈಚಾರಿಕ ಜ್ಞಾನವನ್ನು ಪಡೆಯಿರಿ : ವಿದ್ಯಾರ್ಥಿಗಳಿಗೆ ಸಿಎಂ ಕರೆ
ಪೇದೆ ರಾಜು ಅವರು ತಮಗೆ ಪರಿಚಯವಿದ್ದ ಮಂಜುಳಾ ಜೈನ್ ಅವರನ್ನು ಭೇಟಿ ಮಾಡಿ ಪೇಪರ್ ಗ್ಲಾಸ್ ಹಾಗೂ ಜ್ಯೂಸ್ ತಯಾರಿಕಾ ಘಟಕ ಆರಂಭಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಸಂಬಂಧ ಮಂಜುಳಾ ಅವರು ತಮಗೆ ಪರಿಚಯವಿದ್ದ ಸಿದ್ದೇಶ್ ದಂಪತಿಯನ್ನು ರಾಜುಗೆ ಪರಿಚಯಿಸಿದ್ದಾರೆ.
ನಿಮ್ಮನ್ನೂ ಪಾಲುದಾರರನ್ನಾಗಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ದಂಪತಿಯಿಂದ 35 ಲಕ್ಷ ರೂ. ಹಣ ಪಡೆದಿದ್ದಾರೆ. ನಂತರ ಇವರಿಗೆ ಹಣವನ್ನು ಹಿಂದಿರುಗಿಸಿರಲಿಲ್ಲ. ನಾವು ಕೊಟ್ಟಿರುವ ಹಣವನ್ನು ವಾಪಸ್ ನೀಡಿ ಎಂದು ಕೇಳಲು ಹೋದ ಸಂದರ್ಭದಲ್ಲಿ ಹಣ ಕೊಡಲು ನಿರಾಕರಿಸಿದ್ದಲ್ಲದೇ ನಮ್ಮ ಮೇಲೆ ಪೇದೆ ರಾಜು ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.





