ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಅಭಿಮಾನಿಗಳು ಪತ್ರ ಚಳುವಳಿ ಆರಂಭಿಸಿದ್ದಾರೆ.
ಸಿಎಂ ಕುರ್ಚಿಗಾಗಿ ಪತ್ರ ಬರೆದಿದ್ದು ಆದ ಬಳಿಕ ಈಗ ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಪಕ್ಷದ ಎಸ್‌ಸಿ ವಿಭಾಗದ ವತಿಯಿಂದ ಪೋಸ್ಟ್ ಕಾರ್ಡ್ ಚಳುವಳಿ ಆರಂಭವಾಗಿದೆ.
ಮೈಸೂರಿನ ಗಾಂಧಿ ಚೌಕದಲ್ಲಿ ಹಮ್ಮಿಕೊಂಡಿದ್ದ ಪೋಸ್ಟ್ ಕಾರ್ಡ್ ಅಭಿಯಾನದಲ್ಲಿ ಮಾಜಿ ಮಹಾಪೌರರು, ಸದಸ್ಯರುಗಳು ಸೇರಿದಂತೆ ಅನೇಕರು ಭಾಗಿಯಾಗಿ ಬೇಕೇ ಬೇಕು ಮಂತ್ರಿ ಬೇಕು ಎಂದು ಘೋಷಣೆ ಕೂಗಿದರು.
ಪೋಸ್ಟ್ ಕಾರ್ಡ್‌ನಲ್ಲಿ ಶಾಸಕ ತನ್ವೀರ್ ಸೇಠ್ ಭಾವಚಿತ್ರ ಮುದ್ರಿಸಿ ಸಚಿವ ಸ್ಥಾನಕ್ಕೆ ಒತ್ತಾಯಿಸಿರುವ ಪತ್ರಕ್ಕೆ ಸಹಿ ಹಾಕುವ ಮೂಲಕ ತನ್ವಿರ್‌ಸೇಠ್ ಫ್ಲೇಕಾರ್ಡ್ ಹಿಡಿದುಕೊಂಡು ಜೈಕಾರ ಹಾಕಿದರು.
ಕಾಂಗ್ರೆಸ್ ಹೈಕಮಾಂಡ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪೋಸ್ಟ್ ಕಾರ್ಡ್ ಕಳುಹಿಸಿರುವ ಕಾರ್ಯಕರ್ತರು, ಈ ಬಾರಿ ಶಾಸಕ ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದರು.





