ಮೈಸೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಪರ ಮೈಸೂರು ವಕೀಲರು ಧ್ವನಿ ಎತ್ತಿದ್ದು, ಸುಮಾರು 150 ಮಂದಿ ವಕೀಲರು ಇಂದು ಧರ್ಮಸ್ಥಳ ಯಾತ್ರೆ ಕೈಗೊಂಡಿದ್ದಾರೆ.
ಧರ್ಮಸ್ಥಳದ ಪರ ಅಪಪ್ರಚಾರ ಖಂಡಿಸಿ ಇಂದು ಮೈಸೂರು ವಕೀಲರು ಎರಡು ಬಸ್ ಹಾಗೂ ಹಲವು ಕಾರುಗಳ ಮೂಲಕ ಧರ್ಮಸ್ಥಳ ಯಾತ್ರೆ ಕೈಗೊಂಡಿದ್ದಾರೆ. ಮೈಸೂರು ನ್ಯಾಯಾಲಯದ ಮುಂಭಾಗದಿಂದ ಧರ್ಮಸ್ಥಳಕ್ಕೆ ಯಾತ್ರೆ ಹೊರಟ ವಕೀಲರು, ಶ್ರೀ ಕ್ಷೇತ್ರದಲ್ಲಿ ಮಂಜುನಾಥಸ್ವಾಮಿ ದರ್ಶನ ಪಡೆಯಲಿದ್ದಾರೆ.
ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆ ಅವರನ್ನು ಸಹ ಭೇಟಿ ಮಾಡಲಿದ್ದು, ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಭರವಸೆ ನೀಡಲಿದ್ದಾರೆ.





