Mysore
22
mist

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಸಾಂಸ್ಕೃತಿಕ ರಂಗದಲ್ಲಿ ಮೈಸೂರು ಮುಂಚೂಣಿ : ಶಾಸಕ ಶ್ರೀವತ್ಸ

ಮೈಸೂರು : ಸಾಂಸ್ಕೃತಿಕ ರಂಗದಲ್ಲಿ ಮೈಸೂರು ಮಂಚೂಣಿ ಸ್ಥಾನದಲ್ಲಿದ್ದು ಹಲವು ಕಲಾವಿದರಿಗೆ ಬದುಕು ಕಟ್ಟಿಕೊಟ್ಟಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.

ನಗರದ ಖಿಲ್ಲೆ ಮೊಹಲ್ಲಾದ ಶಂಕರ ಮಠದ ರಸ್ತೆಯಲ್ಲಿರುವ ಅರಮನೆ ಜಪದಕಟ್ಟೆ ಮಠದ ಆವರಣದಲ್ಲಿ ಚಿತ್ಕಲ ಸಾಹಿತ್ಯ ಮತ್ತು ಸಾಂಸ್ಕ ತಿಕ ಪ್ರತಿಷ್ಠಾನ ಹಾಗೂ ಎಸ್‌ಜಿಎಂ ಟೂರ್ಸ್ ಸಹಯೋಗದಲ್ಲಿ ನಡೆದ ಚಿತ್ಕಲ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ,ಕವಿ ಗೋಷ್ಠಿ, ಕಾವ್ಯ ಕುಸುಮ ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಾಹಿತ್ಯ, ಯೋಗ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ಮೈಸೂರು ಮಂಚೂಣಿಯಲ್ಲಿದೆ. ಮೈಸೂರು ಪ್ರತಿಯೊಬ್ಬರಿಗೂ ಪ್ರೇರಣದಾಯಕ ತಾಣವಾಗಿದೆ ಎಂದರು.ರಾಷ್ಟ್ರ ಕವಿ ಕುವೆಂಪು ಅವರು ಆರಂಭದಲ್ಲಿ ಕುಕ್ಕರಹಳ್ಳಿ ಕೆರೆಯ ದಡದಲ್ಲಿ ಕುಳಿತು ಸಾಹಿತ್ಯ ಬರೆಯುತ್ತಿದ್ದರು, ಆ ಸ್ಥಳ ಅವರ ಸಾಹಿತ್ಯ ಬರವಣಿಗೆಗೆ ಪ್ರೇರಣೆಯಾಗಿತ್ತು. ಕನ್ನಡಕ್ಕೆ ಕುವೆಂಪು ಅವರ ಕೊಡುಗೆ ಅಪಾರ ಎಂದು ಹೇಳಿದರು.

ಸಾಂಸ್ಕ ತಿಕ ನಗರಿ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಮೈಸೂರಿನಲ್ಲಿ ಸಾಂಸ್ಕ ತಿಕ ಕಾರ್ಯಕ್ರಮಗಳು ಪ್ರತಿನಿತ್ಯ ನಡೆಯುತ್ತಿರುವುದು ಖುಷಿಯ ವಿಚಾರ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚಿನ ಅವಕಾಶ ನೀಡಬೇಕು ಎಂದರು.

ಇದನ್ನು ಓದಿ: ಆಡಳಿತ ಯಂತ್ರ ಕುಸಿದು, ಭ್ರಷ್ಟಾಚಾರ ಮಿತಿ ಮೀರಿದೆ : ರಾಜ್ಯ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಿಡಿ

ಕನ್ನಡವನ್ನು ಬೆಳಸುವಂತಹ,ಉಳಿಸುವಂತಹ ಕೆಲಸವಾಗಬೇಕಿಲ್ಲ, ಬಳಸಿದರೆ ಸಾಕು, ಬೇರೆ ಭಾಷೆಗಳ ಜ್ಞಾನವಿದ್ದರೂ ನಮ್ಮ ನೆಲದಲ್ಲಿ ಕನ್ನಡದಲ್ಲೇ ಮಾತನಾಡಬೇಕು ಎಂದು ಹೇಳಿದರು.

ಪ್ರಾಚೀನ ಐತಿಹ್ಯ ಹೊಂದಿರುವ ನಮ್ಮ ಕನ್ನಡ ಭಾಷೆಯನ್ನು ಎಲ್ಲರೂ ಪ್ರೀತಿಯಿಂದ ಕಲಿಯಬೇಕು, ಪ್ರೀತಿಯಿಂದ ಮಾತನಾಡಬೇಕೇ ವಿನಃ ಒತ್ತಡದಿಂದಾಗಲಿ, ಬೇರೆಯವರಿಂದ ಹೇರಿಕೆಯಿಂದಾಗಲಿ ಕಲಿಯಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಎಂ.ಕೆ.ಮಹದೇವಸ್ವಾಮಿ ರಚಿಸಿರುವ ‘ಕಾವ್ಯ ಕುಸುಮ’ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಚಿತ್ಕಲ ಸಾಹಿತ್ಯ ಮತ್ತು ಸಾಂಸ್ಕ ತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಕೆ.ಬಿ.ರೂಪದರ್ಶಿನಿ, ಸಾಹಿತಿ ಜಯಪ್ಪ ಹೊನ್ನಾಳಿ, ಸಾಹಿತಿ ಎಂ. ಕೆ.ಮಹದೇವಸ್ವಾಮಿ, ಎಸ್‌ಡಿಎಂ ಟೂರ್ಸ್ ಮತ್ತು ವಧುವರರ ಮಾಹಿತಿ ಕೇಂದ್ರದ ಮುಖ್ಯಸ್ಥರಾದ ಎಂ.ಲೋಕೇಶಯ್ಯ, ಶಿಕ್ಷಕಿ ಸುಮಾ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

Tags:
error: Content is protected !!