Mysore
20
overcast clouds

Social Media

ಬುಧವಾರ, 09 ಅಕ್ಟೋಬರ್ 2024
Light
Dark

ದಸರಾ ಪ್ರಾಯೋಜಕತ್ವ ಅನ್ನೋದು ದುಡ್ಡು ಹೊಡೆಯುವ ಸ್ಕೀಂ ಎಂದ ಎಚ್.ವಿಶ್ವನಾಥ್‌

ಮೈಸೂರು: ದಸರಾ ಮಹೋತ್ಸವದ ಆಚರಣೆಗೆಂದು ಸರ್ಕಾರವೇ 40 ಕೋಟಿ ರೂ ಬಿಡುಗಡೆ ಮಾಡುವುದಾಗಿ ಹೇಳಿದೆ. ಈ ನಡುವೆ ಮತ್ತೆ ಪ್ರಾಯೋಜಕರನ್ನು ಹುಡುಕುತ್ತಿರುವುದಾದರು ಏಕೆ ಎಂದು ವಿಧಾನಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಪ್ರಶ್ನೆ ಮಾಡಿದ್ದಾರೆ.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಿದ್ಧತೆ ಆರಂಭಗೊಂಡಿದ್ದು, ದಸರಾ ಪ್ರಾಯೋಜಕರನ್ನು ಹುಡುಕುವ ಕೆಲಸ ಶುರುವಾಗಿದೆ.

ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಬಾರಿ ಅದ್ಧೂರಿ ದಸರಾ ಮಾಡುವುದಾಗಿ ಹೇಳಿದೆ. ಇದಕ್ಕಾಗಿ 40 ಕೋಟಿ ರೂ ಅನುದಾನವನ್ನು ಘೋಷಣೆ ಮಾಡಿದೆ. ಇಷ್ಟಾದ ಮೇಲೂ ಪ್ರಾಯೋಜಕರ ಬಳಿ ಹಣ ಕೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿಕಾರಿದರು.

 

Tags: