Mysore
26
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮೈಸೂರು | ಬ್ಯಾಂಕ್‌ಗೆ 47.72 ಲಕ್ಷ ರೂ. ವಂಚನೆ ; ಸಿಬ್ಬಂದಿ ವಿರುದ್ದ ಎಫ್‌ಐಆರ್‌

Fraud cases on the rise in Mandya district

ಮೈಸೂರು : ವ್ಯಕ್ತಿಯೊಬ್ಬ ಕೆಲಸ ಬಿಟ್ಟ ನಂತರವೂ ಬ್ಯಾಂಕ್‌ನ ಗ್ರಾಹಕರಿಂದ ಹಣ ಸಂಗ್ರಹಿಸಿ ಬ್ಯಾಂಕ್‌ಗೆ 47,72ಲಕ್ಷ ರೂ. ಹಣವನ್ನು ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.

ನಂಜನಗೂಡಿನ ನಿವಾಸಿ ಮಹದೇವ ಸ್ವಾಮಿ ಎಂಬಾತನೇ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ವಂಚಿಸಿರುವ ವ್ಯಕ್ತಿ. ಮಹದೇವ ಸ್ವಾಮಿ ಈ ಹಿಂದೆ ಇಂಡಸ್ ಬ್ಯಾಂಕ್‌ನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದನು. ಕಳೆದ ಮೇ ತಿಂಗಳಿನಿಂದ ಆತ ಕೆಲಸಕ್ಕೆ ಬಂದಿರಲಿಲ್ಲ. ಅವರ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿತ್ತು. ಹೀಗಾಗಿ ಅನುಮಾನಗೊಂಡ ಅವರು ಮಹದೇವಸ್ವಾಮಿ ಅವರು ಈ ಹಿಂದೆ ವಾಹನಗಳ ಸಾಲಗಳ ವಸೂಲಾತಿ ಮಾಡುತ್ತಿದ್ದವರ ಖಾತೆಗಳನ್ನು ಪರಿಶೀಲಿಸಿದ ವೇಳೆ ಹಲವು ಮಂದಿ ಸಾಲದ ಕಂತು ಕಟ್ಟಿಲ್ಲದಿರುವುದು ಪರಿಶೀಲನೆ ವೇಳೆ ತಿಳಿದುಬಂದಿದೆ.

ಹೀಗಾಗಿ ಲೆಕ್ಕ ಪತ್ರಗಳನ್ನು ಪರಿಶೀಲಿಸಿದ ವೇಳೆ ಆತ ೪೭,೭೨,೮೧೦ ರೂ. ಹಣವನ್ನು ಗ್ರಾಹಕರಿಂದ ಸಂಗ್ರಹಿಸಿ ಬ್ಯಾಂಕ್‌ಗೆ ಪಾವತಿಸಿಲ್ಲದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಬ್ಯಾಂಕ್‌ನ ಅಧಿಕಾರಿಗಳು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:-ಕಾಫಿತೋಟದಲ್ಲಿ ಕಾಣೆಯಾಗಿದ್ದ 2 ವರ್ಷದ ಬಾಲಕಿ ; ಪತ್ತೆಹಚ್ಚಿದ ಶ್ವಾನ !

Tags:
error: Content is protected !!