Mysore
16
scattered clouds

Social Media

ಬುಧವಾರ, 21 ಜನವರಿ 2026
Light
Dark

ಮೈಸೂರು | ಗಾಂಜ ಮಾರಾಟಕ್ಕೆ ಯತ್ನ ; ಇಬ್ಬರ ಬಂಧನ

ಮೈಸೂರು : ಗಾಂಜ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಬಂಧಿಸಿರುವ ಕೆ.ಆರ್ ಠಾಣಾ ಪೊಲೀಸರು, ಆವರಿಂದ 3.44 ಕೆಜಿ ಗಾಂಜವನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಕಾಕರವಾಡಿ ನಿವಾಸಿ ಇರ್ಫಾನ್ ಹಾಗೂ ಮದ್ದೂರಿನ ಸುಹೇಲ್ ಪಾಷಾ ಬಂಧಿತ ಆರೋಪಿಗಳು.

ನಗರದ ಜೆಎಸ್‌ಎಸ್ ಆಸ್ಪತ್ರೆಯ ಮುಂಬಾಗದ ರಸ್ತೆಯಲ್ಲಿ ಆರೋಪಿಗಳು ಗಾಂಜ ಮಾರಾಟ ಮಾಡಲು ಯತ್ನಿಸುತ್ತಿರುವ ವಿಚಾರ ಪೊಲೀಸರಿಗೆ ತಿಳಿದುಬಂದಿತ್ತು. ಕೂಡಲೇ ಪೊಲೀಸರ ತಂಡ ಸ್ಥಳಕ್ಕೆ ತೆರಳಿದ್ದಾರೆ.

ಇದನ್ನೂ ಓದಿ:-IPL ಚಾಂಪಿಯನ್‌ RCB ಮಾರಾಟಕ್ಕಿದೆ.. ! ಯಾರ ಪಾಲು..? ಎಷ್ಟು ಮೊತ್ತಾ ಗೊತ್ತಾ?

ಪೊಲೀಸರನ್ನು ಕಂಡೊಡನೆ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅವರನ್ನು ಸುತ್ತುವರೆದ ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಆರೋಪಿಗಳ ಬಳಿ ಇದ್ದ ಗಾಂಜವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಎಂಡಿಎಂಎ ವಶ
ಇದೇ ವೇಳೆ ನಗರದ ರಾಜೀವ್‌ನಗರ 2ನೇ ಹಂತದ ಬಳಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಕಲ್ಯಾಣಗಿರಿ ನಿವಾಸಿ ಮಹಮದ್ ಉಬೇದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಸಾವಿರಾರು ರೂ. ಮೌಲ್ಯದ ಎಂಡಿಎಂಎ ವಶಕ್ಕೆ ಪಡೆದಿರುವ ಉದಯಗಿರಿ ಠಾಣಾ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Tags:
error: Content is protected !!