ಮೈಸೂರು : ಹೆಚ್ಚಿನ ಲಾಭದಾಸೆಗೆ ಬಿದ್ದು ನಕಲಿ ಕಂಪನಿ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ ಮಹಿಳೆಯೊಬ್ಬರು ಬರೋಬ್ಬರಿ 1.58 ಕೋಟಿ ರೂ. ಹಣವನ್ನು ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಈ ಸಂಬಂಧ ಮೈಸೂರಿನ ಸೈಬರ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಗರದ ಜೆಪಿನಗರ ನಿವಾಸಿ ಮಹಿಳೆಗೆ ವಾಟ್ಸಾಪ್ ಗ್ರೂಪ್‌ನಲ್ಲಿ ಷೇರು ಮಾರುಕಟ್ಟೆ ಬಗ್ಗೆ ಮಾಹಿತಿ ದೊರಕಿದೆ. ನಂತರ ಅವರು ಸ್ಯಾಮ್ಕೋ ಹಾಗೂ ಟೆನ್‌ಕೋರ್ ಎಂಬ ಆಪ್ ಮೂಲಕ ಮೊದಲಿಗೆ 60 ಸಾವಿರ ರೂ. ಹಣ ಹೂಡಿಕೆ ಮಾಡಿದ್ದಾರೆ.
ಇದನ್ನೂ ಓದಿ :-12 ರಾಜ್ಯಗಳಲ್ಲಿ SIR ಜಾರಿ ; ಕರ್ನಾಟಕದಲ್ಲೂ ನಡೆಯುತ್ತಾ? ಏನಿದು SIR, ಇಲ್ಲಿದೆ ಕಂಪ್ಲಿಟ್ ಡೀಟೆಲ್ಸ್….
ಇದರಿಂದಾಗಿ ವಂಚಕರು ಅವರಿಗೆ ಲಾಭವನ್ನು ನೀಡಿ ಹಣದ ಆಸೆ ಹುಟ್ಟಿಸಿದ್ದಾರೆ. ನಂತರ ಆಕೆ ಹೆಚ್ಚಿನ ಹಣದಾಸೆಗೆ ಹಂತಹಂತವಾಗಿ ತನ್ನ ಬ್ಯಾಂಕ್ ಖಾತೆಯಿಂದ ವಂಚಕರ ಖಾತೆಗೆ 1,58,93000 ರೂ. ಹಣವನ್ನು ವರ್ಗಾಯಿಸಿದ್ದಾರೆ.
ನಂತರ ವಂಚಕರು ನಿಮಗೆ ಹೆಚ್ಚಿನ ಲಾಭ ಬಂದಿದೆ. ಹಣವನು ಪಡೆಯಲು 16 ಲಕ್ಷ ರೂ. ಹಣವನ್ನು ಖಾತೆಗೆ ಜಮೆ ಮಾಡುವಂತೆ ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ಆಕೆ ವಿಚಾರಿಸಿದ ವೇಳೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಕೂಡಲೇ ಆಕೆ ಸೈಬರ್ ಅಪರಾಧ ಠಾಣೆಗೆ ದೂರು ಸಲ್ಲಿಸಿದ್ದಾರೆ.



