ಮೈಸೂರು: ಗಾಂಜಾ, ಡ್ರಗ್ಸ್ ಸೇವಿಸಿ ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಮೃತ ಯುವಕನ ತಾಯಿ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನ ಶಾಂತಿನಗರದಲ್ಲಿ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವಕನ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಈ ಬಗ್ಗೆ ಮಾತನಾಡಿರುವ ಅವರು, ಗಾಂಜಾ, ಡ್ರಗ್ಸ್ ಸೇವಿಸಿ ನನ್ನ ಮಗನನ್ನ ಕೊಲೆ ಮಾಡಿದ್ದಾರೆ. ಶಾಂತಿ ನಗರದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಚಿಕ್ಕ ಚಿಕ್ಕ ಬಾಲಕರು ಡ್ರಗ್ಸ್, ಗಾಂಜಾ, ಟ್ಯಾಬ್ಲೆಟ್ ಹಾಗೂ ಸೆಲ್ಯೂಷನ್ ಸೇವನೆ ಮಾಡುತ್ತಿದ್ದಾರೆ. ಪ್ರತಿನಿತ್ಯ ಬಾಲಕರು ನಶೆಯಲ್ಲಿರುತ್ತಾರೆ. ನನ್ನ ಮಗ ಸೂಫಿಯನ್ ಇಂದು ಬೆಳಗ್ಗೆ ನಮಾಜ್‌ಗೆ ಹೋಗಿದ್ದ. ನಂತರ ಟೀ ಕುಡಿಯುವಾಗ ಸ್ನೇಹಿತರೇ ಚಾಕು ಹಾಕಿ ಕೊಲೆ ಮಾಡಿದ್ದಾರೆ. ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ. ಇಲ್ಲವಾದ್ರೆ ನಮ್ಮನ್ನ ಕೊಲೆ ಮಾಡಿ ಎಂದು ಸೂಫಿಯಾನ್ ತಾಯಿ ಶಾಯಿನ್ ತಾಜ್ ಗೋಳಾಡಿದರು.




