ಮೈಸೂರು: ಮುಡಾದಲ್ಲಿ ಸಿಎಂ ಪತ್ನಿ ಪಡೆದ 14 ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಸಿದ್ಧರಾಗೆ ಬರುತ್ತೇವೆ ಎಂದು ಕೈ ಸಂಸದ ಕುಮಾರ್ ನಾಯಕ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನನಗೆ ತಿಳಿದಿರುವ ಮಟ್ಟಿಗೆ ಯಾವುದೇ ಗೊಂದಲ ಇಲ್ಲ. ಭೂಮಿ ಕಳೆದುಕೊಂಡವರಿಗೆ ಪರಿಹಾರ ಕೊಡೋದು ಇದೆ. ಭೂಸ್ವಾಧೀನ ಮುಖಾಂತರ ಪರಿಹಾರ ಕೊಡುವ ಕೆಲಸ ಆಗಿದೆ. ಯಾರಾದರೂ ಆಪಾದನೆ ಮಾಡಿದಾಗ ಅಧಿಕಾರಿಗಳಾದ ನಾವು ಪರೀಕ್ಷೆಗೆ ಒಳಪಡುವುದು ನ್ಯಾಚುರಲ್ ಜಸ್ಟಿಸ್. ಈಗಾಗಿ ನಾವು ಇದಕ್ಕೆ ಸಿದ್ದರಾಗೆ ಬಂದಿದ್ದೇವೆ. ವಿಚಾರಣೆ ಎದುರಿಸಿದ್ದೇವೆ, ಅವರು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟು ಬಂದಿದ್ದೇವೆ ಮುಂದೆ ನೋಡೋಣ. ಮುಡಾ ಕೇಸ್ ತಾರ್ಕಿಕ ಅಂತ್ಯಕ್ಕೆ ಬಂದಾಗ ಪರಿಹಾರ ತಗೋಳೋದು ಬಿಡೋದು ಅವರು ತೀರ್ಮಾನ ಮಾಡ್ತಾರೆ ಎಂದು ಹೇಳಿದರು.





