ಮೈಸೂರು: ಮೈಸೂರಿನಲ್ಲಿ ಬೆಳ್ಳಂ ಬೆಳಗ್ಗೆಯೇ ಜೆಸಿಬಿಗಳು ಘರ್ಜಿಸಿದ್ದು, 8 ಎಕರೆ 28 ಗುಂಟೆ ಜಾಗವನ್ನು ಮುಡಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ವಿಜಯನಗರ 4ನೇ ಹಂತದಲ್ಲಿ ಇಂದು ಬೆಳಿಗ್ಗೆ ತೆರವು ಕಾರ್ಯಾಚರಣೆ ನಡೆದಿದೆ.
ಹಲವಾರು ವರ್ಷಗಳಿಂದ ವಾಸವಿದ್ದ ಜನರು ಸ್ವಲ್ಪ ಕಾಲವಕಾಶ ನೀಡಿ ಎಂದು ಅಳಲು ತೋಡಿಕೊಂಡರೂ ಬಿಡದ ಮುಡಾ ಅಧಿಕಾರಿಗಳು ಮನೆಗಳ ತೆರವಿಗೆ ಮುಂದಾದರು. ಈ ವೇಳೆ ನಿವಾಸಿಗಳ ಹಾಗೂ ಮುಡಾ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.
ಬಳಿಕ ಪೊಲೀಸರ ಸರ್ಪಗಾವಲಿನಲ್ಲಿ ನಡೆದ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ಸರ್ವೇ ನಂಬರ್ 108, 109ರ ಜಾಗವನ್ನು ವಶಪಡಿಸಿಕೊಳ್ಳಲಾಯಿತು. ಕಳೆದ 2002ರಲ್ಲಿ 8 ಎಕರೆ ಜಾಗಕ್ಕೆ ಮುಡಾ 4 ಲಕ್ಷ ಪರಿಹಾರ ನೀಡಿತ್ತು. ಆದರೆ ನಿವಾಸಿಗಳು
ಮೂಡ ನೀಡಿದ್ದ ಪರಿಹಾರ ತೆಗೆದುಕೊಳ್ಳಲಿಲ್ಲ ಎನ್ನಲಾಗಿದ್ದು, ಮೂಡ ಅಧಿಕಾರಿಗಳ ಬಳಿ ಕಾಲಾವಕಾಶ ಕೇಳಿಕೊಂಡಿದ್ದರು.
ಸದ್ಯ ಈ ಪ್ರಕರಣ ಹೈ ಕೋರ್ಟ್‌ನ ಡಬಲ್ ಬೆಂಚ್‌ನಲ್ಲಿದೆ.





