Mysore
18
broken clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಶ್ರೀರಾಮುಲು ಪರ ಬ್ಯಾಟ್‌ ಬೀಸಿದ ಎಂಎಲ್‌ಸಿ ವಿಶ್ವನಾಥ್‌

ಮೈಸೂರು: ಮಾಜಿ ಸಚಿವ ಶ್ರೀರಾಮುಲು ಹಾಗೂ ಶಾಸಕ ಜನಾರ್ಧನ್‌ ರೆಡ್ಡಿ ನಡುವೆ ಉಂಟಾಗಿರುವ ಗೊಂದಲಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌, ಶ್ರೀರಾಮುಲು ಪರ ಬ್ಯಾಟ್‌ ಬೀಸಿದ್ದಾರೆ.

ಈ ಕುರಿತ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ವಾಲ್ಮಿಕಿ ಸಮುದಾಯದ ನಾಯಕ. ಜನಾರ್ಧನ ರೆಡ್ಡಿ ಗೆದ್ದಿದ್ದೇ ಶ್ರೀರಾಮುಲುವಿನಿಂದ ಆತನ ಬಗ್ಗೆ ರೆಡ್ಡಿ ಹೀಗೆಲ್ಲಾ ಲಘುವಾಗಿ ಮಾತನಾಡಬಾರದು. ಗಣಿ ದುಡ್ಡಲ್ಲಿ ರೆಡ್ಡಿ ಗೆದ್ದಿದ್ದಾನೆ. ದುಡ್ಡೇನು ಅವರಪ್ಪನ ಮನೆಯಿಂದ ತಂದಿದ್ದಾ? ಎಂದು ಹೇಳಿದರು.

ಬಿಜೆಪಿ ವರಿಷ್ಠರ ಸಭೆ ವಿಚಾರದ ಬಗ್ಗೆ ಮಾತನಾಡಿ, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದಲ್ಲೂ ಇರೋರು ಡಮ್ಮಿ ವರಿಷ್ಠರು. ಯಾರೋ ಹೇಳಿದ್ದನ್ನು ಬಂದು ಹೇಳುವ ವರಿಷ್ಠರು ಇದ್ದಾರೆ. ಸಭೆಯಲ್ಲಿ ಎಲ್ಲಿ ನಾನು ಕೆಲವು ವಿಷಯ ಬಾಯಿ ಬಿಡುತ್ತೇನೋ ಎಂದು ನನ್ನನ್ನು ಬಿಜೆಪಿ ಸಭೆಗೆ ಕರೆಯೋದಿಲ್ಲ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ವಿಜಯೇಂದ್ರ ಯಾರು? ಯಡಿಯೂರಪ್ಪ ಯಾರು? ಎಂದು ಎಲ್ಲರಿಗೂ ಗೊತ್ತು. ವಿಜಯೇಂದ್ರಗೆ ಅಧಿಕಾರ ಮಾಡಲು ಯತ್ನಾಳ್ ಗುಂಪು ಬಿಡುತ್ತಿಲ್ಲ. ಆದ ಕಾರಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕು ಎಂದು ಮಾತನಾಡಿದರು.

Tags: