Mysore
17
clear sky

Social Media

ಬುಧವಾರ, 21 ಜನವರಿ 2026
Light
Dark

ಸಚಿವ ಪ್ರಿಯಾಂಕ್ ಖರ್ಗೆ ಬೆದರಿಕೆ ಕರೆ ವಿಚಾರ: ಹೋಂ ಮಿನಿಸ್ಟರ್‌ ಹೇಳಿದ್ದಿಷ್ಟು.!

ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ನಿಷೇಧ ಹೇರುವಂತೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರ ಬರೆದಿದ್ದು, ಬೆದರಿಕೆ ಕರೆ ಬಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆ ಬಂದಿದೆ ಎಂದು ಪತ್ರ ಬರೆದಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವುದಕ್ಕೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಆರ್‌ಎಸ್‌ಎಸ್‌ ಬ್ಯಾನ್‌ ಬಗ್ಗೆ ಸಿಎಂಗೆ ಪತ್ರ ಬರೆದಿದ್ದಾರೆ. ಇದರ ಬಗ್ಗೆ ಸರ್ಕಾರ ತೀರ್ಮಾನವನ್ನು ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ಏನು ಹೇಳುವುದಕ್ಕೆ ಅಗುವುದಿಲ್ಲ ಎಂದರು.

ಇದನ್ನು ಓದಿ: ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಇನ್ನು ಜೆಡಿಎಸ್ ಶಾಸಕರಿಗೆ ಅನುದಾನ ತಾರತಮ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲರಿಗೂ ಅನುದಾನ ಕೊಡುತ್ತಿದ್ದೇವೆ. ಬಿಜೆಪಿ ಅವರು ಈ ಹಿಂದೆ ಏನು ಮಾಡಿದ್ರು ಅಂತ ಅವರು ನೆನಪು ಮಾಡಿಕೊಳ್ಳಲ್ಲಿ. ನಾವು ಆ ರೀತಿ ಯಾರಿಗೂ ತಾರತಮ್ಯ ಮಾಡುವುದಿಲ್ಲ‌ ಎಂದು ಹೇಳಿದರು.

ಇನ್ನು ಐಟಿ ಕಂಪನಿಗಳು ಬೇರೆಡೆ ಸ್ಥಳಾಂತರವಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಸ್ತೆ ಹಾಳಗಿದೆ ಎನ್ನುವ ಸಮಸ್ಯೆ ಇದ್ದರೆ ಇದನ್ನು ಸರಿ ಮಾಡುತ್ತೇವೆ. ಬೆಂಗಳೂರಿನ ಗುಂಡಿ ಮುಚ್ಚುವುದಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅದೇಶ ನೀಡಿದ್ದಾರೆ. ಐಟಿ ಅವರ ಸಮಸ್ಯೆ ಏನಿದೆ ಅದನ್ನು ಬಗೆಹರಿಸುತ್ತೇವೆ. ಅವರಿಗೆ ತಿಳಿ ಹೇಳುವ ಕೆಲಸ ಮಾಡುತ್ತೇವೆ. ಕರ್ನಾಟಕಕ್ಕೆ ಯಾರೇ ಬಂದರು ಅವರಿಗೆ ಬಂಡವಾಳ ಹೂಡುವುದಕ್ಕೆ ಬೇಕಾದ ಸಹಾಯ ಮಾಡುತ್ತೇವೆ. ಗೂಗಲ್ ಅವರು ಅವರದ್ದೇ ಕಾರಣಕ್ಕೆ ಆಂಧ್ರಕ್ಕೆ ಹೋಗಿದ್ದಾರೆ. ಕೇವಲ ರಸ್ತೆ ವಿಚಾರಕ್ಕೆ ಅಲ್ಲಿಗೆ ಹೋಗಿಲ್ಲ. ಹಾಗಾಗಿದ್ರೆ ಗ್ಲೋಬಲ್ ಇನ್ವೆಸ್ಟ್ ಮೆಂಟ್ ಮಾಡಿ 10 ಲಕ್ಷ ಕೋಟಿ ಹೂಡಿಕೆ ಮಾಡುವುದಕ್ಕೆ ಸಹಿ ಮಾಡುತ್ತಿರಲಿಲ್ಲ ಎಂದು ಹೇಳಿದರು.

Tags:
error: Content is protected !!