ಮೈಸೂರು: ನಗರದ ಮಧ್ಯಭಾಗದಲ್ಲಿರುವ ಸಯ್ಯಾಜಿರಾವ್ ರಸ್ತೆಯಲ್ಲಿ ಇಂದು ಮಾರುತಿ ವ್ಯಾನ್‌ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಸಂಭವಿಸಿದೆ.
ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ವ್ಯಾನ್‌ನಿಂದ ಅಚಾನಕ್ ಹೊಗೆ ಎದ್ದಿದ್ದು, ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿತು. ಸದ್ಯ ಘಟನೆಯ ವೇಳೆ ವಾಹನದೊಳಗೆ ಯಾರೂ ಇರದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇದನ್ನು ಓದಿ: ಮೈಸೂರು | ಕುಡಿಯಲು ಹಣ ನಿಡಲಿಲ್ಲವೆಂದು ಮನೆಗೆ ಬೆಂಕಿ ಹಚ್ಚಿದ ಭೂಪ
ಬೆಂಕಿ ಹೊತ್ತಿಕೊಂಡ ಕ್ಷಣದಲ್ಲೇ ಸ್ಥಳೀಯರು ತಕ್ಷಣ ತುರ್ತು ಪ್ರತಿಕ್ರಿಯೆ ನೀಡಿ ನೀರಿನಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಿಂದಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
ಇನ್ನು ಸಯ್ಯಾಜಿರಾವ್ ರಸ್ತೆಯಲ್ಲಿ ಜನಸಂಚಾರ ಹೆಚ್ಚಿರುವ ಪರಿಣಾಮ ಈ ಘಟನೆ ಕೆಲಕಾಲ ಭೀತಿಯ ವಾತಾವರಣ ಸೃಷ್ಟಿಸಿತ್ತು.





