Mysore
29
few clouds

Social Media

ಶನಿವಾರ, 03 ಜನವರಿ 2026
Light
Dark

ಮೈಸೂರಿನಲ್ಲಿ ಮಹಿಷ ಮಂಡಲೋತ್ಸವ: ಪ್ರೊ.ಭಗವಾನ್ ಭಾಷಣ

ಮೈಸೂರು: ದೀನ ದಲಿತರ ಕುತ್ತಿಗೆಯನ್ನು ಹಿಂದೂ ಧರ್ಮ ಮೆಟ್ಟಿ ತುಳಿಯುವಂತೆ ಯಾವ ಧರ್ಮವು ತುಳಿದಿಲ್ಲ ಎಂದು ಪ್ರೊಫೆಸರ್‌ ಭಗವಾನ್‌ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ನಡೆದ ಮಹಿಷ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಚತುರ್ವರ್ಣ ಇದೇ. ಇದರಲ್ಲಿ ನಾಲ್ಕನೇ ವರ್ಣ ಶೂದ್ರ. ಶೂದ್ರ ಅಂದ್ರೆ ಗುಲಾಮರು. ಶೂದ್ರ ಅಂದ್ರೆ ಏನು ಎಂಬುದನ್ನು ಮನುಸ್ಮೃತಿಯೇ ಬೇರೆ ರೀತಿಯಲ್ಲಿ ಹೇಳುತ್ತೆ. ಹಿಂದೂ ಧರ್ಮವನ್ನು ಸ್ವಾಮಿ ವಿವೇಕಾನಂದರು ಟೀಕೆ ಮಾಡಿರುವಷ್ಟು ಅಂಬೇಡ್ಕರ್ ಕೂಡ ಮಾಡಿಲ್ಲ. ದೀನ ದಲಿತರ ಕುತ್ತಿಗೆಯನ್ನು ಹಿಂದೂ ಧರ್ಮ ಮೆಟ್ಟಿ ತುಳಿಯುವಂತೆ ಯಾವ ಧರ್ಮವು ತುಳಿದಿಲ್ಲ. ಇದು ಸ್ವಾಮಿ ವಿವೇಕಾನಂದ ಹೇಳಿರೋದು.

ಇದನ್ನು ಓದಿ : ಮೈಸೂರಿನಲ್ಲಿ ಮಹಿಷ ಮಂಡಲೋತ್ಸವ ಕಾರ್ಯಕ್ರಮ

ನೀವೆಲ್ಲಾ ಸ್ವಾಭಿಮಾನಿಗಳಾಗಬೇಕು. 1925 ಪೆರಿಯಾರ್ ಸ್ವಾಭಿಮಾನಿ ಚಳುವಳಿ ಮಾಡಿದ್ರು. ತಮಿಳುನಾಡಿನಲ್ಲಿ ಚಳುವಳಿ ಮಾಡಿ ಬ್ರಾಹ್ಮಣರ ಹಿಡಿತ ತಪ್ಪಿಸಿದರು. ಕರ್ನಾಟಕದಲ್ಲಿ ಬಸವಣ್ಣ ಮಾಡಿದ್ರು. ಆದ್ರೆ ಜನ ಸರಿಯಾಗಿ ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಎಲ್ಲರೂ ಜಾತಿ ವಿನಾಶ ಪುಸ್ತಕ ಓದಿ ಸರಿಯಾದ ಧರ್ಮ ಯಾವುದು ಎಂದು ತಿಳಿದುಕೊಳ್ಳಲು ಬುದ್ಧ ಮತ್ತು ಧಮ್ಮ ಪುಸ್ತಕ ಓದಿ. ಐಸ್ಟಿನ್ ಕೂಡ ಬುದ್ಧ ಧಮ್ಮ ಕುರಿತು ಹೊಗಳಿದ್ದಾರೆ ಎಂದು ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಡಿಸಿಪಿ ಸಿದ್ದರಾಜು ಅವರು, ಜಾತಿ ಕಲಂನಲ್ಲಿ ಹಿಂದೂ ಅಂತ ಬರೆಸಬೇಡಿ. ಬೌದ್ಧ ಅಂತ ಬರೆಸಿ. ಆನೆ ಶಾಂತಿಯ ಸಂಕೇತ. ಮುಂದಿನ ದಿನಗಳಲ್ಲಿ ದಸರಾದಲ್ಲಿ ಆನೆಯ ಮೇಲೆ ಸಂವಿಧಾನ ಇಟ್ಟು ಮೆರವಣಿಗೆ ಮಾಡಬೇಕು. ಈಗ ಬುದ್ಧ ಬಸವ ಅಂಬೇಡ್ಕರ್ ಇದೆ. ಇನ್ನು ಮುಂದೆ. ಬುದ್ಧ ಅಂಬೇಡ್ಕರ್ ಅಶೋಕ ಇರಬೇಕು ಎಂದು ಹೇಳಿದರು.

Tags:
error: Content is protected !!