Mysore
28
scattered clouds

Social Media

ಸೋಮವಾರ, 12 ಜನವರಿ 2026
Light
Dark

ಲಕ್ಷ್ಮಣ್‌ಗೆ 5 ಬಾರಿ ಸೋತು ತಲೆಕೆಟ್ಟಿದೆ, ಹುಚ್ಚು ಹಿಡಿದಿದೆ: ಎಂ.ಜಿ.ಮಹೇಶ್ ಆಕ್ರೋಶ

M G Mahesh Reaction On KPCC spokesperson M Lakshman Statement

ಮೈಸೂರು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ಗೆ ಐದು ಬಾರಿ ಚುನಾವಣೆಯಲ್ಲಿ ಸೋತು ತಲೆಕೆಟ್ಟಿದ್ದು, ಹುಚ್ಚು ಹಿಡಿದಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಕಿಡಿಕಾರಿದ್ದಾರೆ.

ಪಹಲ್ಗಾಮ್ ಉಗ್ರರ ದಾಳಿಗೆ ಆಂತರಿಕ ಭದ್ರತಾ ವೈಫಲ್ಯ ಕಾರಣ. ಇದಕ್ಕೆ ಕೇಂದ್ರ ಬಿಜೆಪಿಯೂ ಕಾರಣ. ಈ ಹಿನ್ನೆಲೆಯಲ್ಲಿ ಘಟನೆಯ ನೈತಿಕ ಹೊಣೆ ಹೊತ್ತು ಬಿಜೆಪಿ ನಾಯಕರು ರಾಜೀನಾಮೆ ನೀಡಿ ಹೊರ ಬರಬೇಕು ಎಂದು ಹೊರಬೇಕು ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಅವರು, ಲಕ್ಷ್ಮಣ್ ಚುನಾವಣೆಗಳಲ್ಲಿ ಐದಾರು ಬಾರಿ ಸೋತು ಹುಚ್ಚನಂತೆ ಮಾತಾಡುತ್ತಾನೆ. ಆತನ‌ ಮೇಲೆ ದೇಶ ದ್ರೋಹದ ಕೇಸ್ ದಾಖಲು ಮಾಡುತ್ತೇವೆ. ದೇಶ ಉಗ್ರರ ದಾಳಿಯಿಂದ ದುಃಖದಲ್ಲಿರುವಾಗ ಈ ರೀತಿ ಹುಚ್ಚನಂತೆ ಹೇಳಿಕೆ ಕೊಡುವುದು ಖಂಡನೀಯ. ಈ ಕೂಡಲೇ ಪೋಲಿಸರು ಅವನ‌ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಇನ್ನು ದೇಶ ಒಂದು ಕಡೆ ಪಾಕಿಸ್ತಾನದ ಮೇಲೆ ಪ್ರತಿಕಾರ ತೀರಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಪಾಪಿಗಳನ್ನು ಬಿಡಬಾರದು. ಅವರಿಗೆ ಪ್ರಧಾನಿ ಮೋದಿ ಜೀ ತಕ್ಕ ಪಾಠ ಕಲಿಸುತ್ತಾರೆ. ಈ ಮೂಲಕ ಪ್ರತಿಕಾರ ತೀರಿಸಿಕೊಳ್ಳುತ್ತಾರೆ. ಈಗಾಗಲೇ ರಾಜತಾಂತ್ರಿಕ ವ್ಯವಸ್ಥೆ ಮೂಲಕ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಎಲ್ಲಾ ಪಾಕಿಸ್ತಾನದ ಪ್ರಜೆಗಳನ್ನು ಗಡಿಪಾರು ಮಾಡುವ ನಿರ್ಧಾರವನ್ನ ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಇದು ಸ್ವಾಗತಾರ್ಹ ವಿಷಯ ಎಂದರು.

Tags:
error: Content is protected !!