Mysore
20
overcast clouds

Social Media

ಶುಕ್ರವಾರ, 02 ಜನವರಿ 2026
Light
Dark

ಪ್ರೀತಿ ವಿಚಾರಕ್ಕೆ ಗಲಾಟೆ: ಶಿಕ್ಷಕಿಗೆ ಚಾಕು ಇರಿದು ಕೊಲೆ ಮಾಡಿದ ಯುವಕ

Love Dispute Turns Violent: Youth Stabs and Kills Teacher

ಮೈಸೂರು: ಪ್ರೀತಿ ವಿಚಾರಕ್ಕೆ ಕಿರಿಕ್‌ ನಡೆದ ಪರಿಣಾಮ ಶಿಕ್ಷಕಿಯ ಮೇಲೆ ಯುವಕನೋರ್ವ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಅಶೋಕಪುರಂನಲ್ಲಿ ನಡೆದಿದೆ.

ಪಾಂಡವಪುರದ ಎಲೆಕೆರೆ ಹ್ಯಾಂಡ್‌ಪೋಸ್ಟ್‌ ಮೂಲದ ಪೂರ್ಣಿಮಾ ಎಂಬುವವರೇ ಹತ್ಯೆಯಾದ ಮಹಿಳೆಯಾಗಿದ್ದು, ಕ್ಯಾತನಹಳ್ಳಿ ಗ್ರಾಮದ ಅಭಿಷೇಕ್‌ ಎಂಬುವವನೇ ಹತ್ಯೆ ಮಾಡಿರುವ ಆರೋಪಿಯಾಗಿದ್ದಾನೆ.

ಶುಕ್ರವಾರ ಆರೋಪಿ ಅಭಿಷೇಕ್‌ ಶಿಕ್ಷಕಿಗೆ ಚಾಕು ಇರಿದು ಪರಾರಿಯಾಗಿದ್ದ. ಚಾಕು ಇರಿತದಿಂದ ಗಾಯಗೊಂಡಿದ್ದ ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾರೆ.

ಪ್ರೀತಿ ವಿಚಾರದಲ್ಲಿ ಕೋಪದಿಂದ ಯುವಕ ಮಹಿಳೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಎಂದು ತಿಳಿದುಬಂದಿದ್ದು, ಆರೋಪಿ ಅಭಿಷೇಕ್‌ ಈಗ ಪೊಲೀಸರ ಅತಿಥಿಯಾಗಿದ್ದಾನೆ.

Tags:
error: Content is protected !!