ಮೈಸೂರು : ರಾಜ್ಯದಲ್ಲಿ ನಾಯಕತ್ವ, ಅಧಿಕಾರ ಹಂಚಿಕೆ ಕಿತ್ತಾಟ ಬಿಟ್ಟು ರಾಜ್ಯದ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಲಿ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ, ಅಧಿಕಾರ ಹಂಚಿಕೆ ಚರ್ಚೆ ಹೊಸದಾಗಿ ನಡೆಯುತ್ತಿಲ್ಲ. ಮೊದಲಿನಿಂದಲೂ ನಡೆಯುತ್ತಿದೆ. ನಮ್ಮ ಕೈಯಲ್ಲಿ ಇಲ್ಲ, ಅವರ ಕೈಯಲ್ಲಿಯೂ ಇಲ್ಲ. ಅದೆಲ್ಲವೂ ಅವರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.
ಇದನ್ನೂ ಓದಿ:-ಮೈಸೂರು | ಬೆಳ್ಳಂಬೆಳಗ್ಗೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಹತ್ಯೆ!
ಬೆಳಗಾವಿ ಅಧಿವೇಶನದಲ್ಲಿ ನಾಡಿನ ಜನರಿಗೆ ಶಾಂತಿ, ನೆಮ್ಮದಿ ಕೊಡುವ ಬಗ್ಗೆ ಚರ್ಚೆಗಳಾಗಬೇಕು. ಅಧಿಕಾರ ಹಂಚಿಕೆ ಬಿಟ್ಟು ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕು. ರಾಜ್ಯದ ೨೨೪ ಕ್ಷೇತ್ರದ ಶಾಸಕರು ಒಟ್ಟಾಗಿ ಚರ್ಚೆ ನಡೆಸಬೇಕು. ಅಭಿವೃದ್ಧಿ ಬಗ್ಗೆ ಮಾತನಾಡಬೇಕು. ನಾನು ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಿದ್ದರಿಂದ ಹೋಗಿರಲಿಲ್ಲ. ಮುಂದಿನ ವಾರ ಅಧಿವೇಶನಕ್ಕೆ ಹೋಗುವೆ ಎಂದರು.



