Mysore
28
scattered clouds

Social Media

ಸೋಮವಾರ, 17 ನವೆಂಬರ್ 2025
Light
Dark

ಮೈಸೂರಿನ ಇನ್ಫೋಸಿಸ್‌ನಲ್ಲಿ ಚಿರತೆ ಪ್ರತ್ಯಕ್ಷ: ಚಿರತೆ ಸೆರೆಗೆ 3ನೇ ದಿನವೂ ಮುಂದುವರೆದ ಕಾರ್ಯಾಚರಣೆ

ಮೈಸೂರು: ನಗರದ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಡಿ.31ರಂದು ಚಿರತೆಯ ಚಲನವಲನ ಕಂಡು ಬಂದಿದ್ದು, ಚಿರತೆ ಸೆರೆಗೆ ಅರಣ್ಯ ಇಲಾಖೆ ವತಿಯಿಂದ ಮೂರನೇ ದಿನವೂ ಕಾರ್ಯಾಚರಣೆ ಮುಂದುವರೆದಿದೆ.

ಈ ಕುರಿತು(ಜನವರಿ.2) ಮುಖ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಡಿಸಿಎಫ್‌ ಅಧಿಕಾರಿಗಳಾದ ಐ.ಬಿ.ಪ್ರಭುಗೌಡ ಹಾಗೂ ಬಸವರಾಜು ಅವರಿಂದ ಮಾಹಿತಿ ಪಡೆದಿದ್ದಾರೆ.

ಚಿರತೆ ಸೆರೆಗಾಗಿ ಇಲಾಖೆಯ 40 ಮಂದಿ ಸಿಬ್ಬಂದಿ ಕಾರ್ಯಾಚರಣೆ ನಡೆದಿದ್ದು, ಥರ್ಮಲ್‌ ಕ್ಯಾಮೆರಾ ಅಳವಡಿಸಿರುವ ಡ್ರೋನ್‌ ಮತ್ತು ಚಿರತೆ ಹೆಜ್ಜೆ ಗುರುತಿನ ಪತ್ತೆಗೆ ನಿರಂತರವಾಗಿ ಹುಡುಕಾಟ ನಡೆಸಿದರೂ ಕೂಡ ಕ್ಯಾಮೆರಾ ಟ್ರ್ಯಾಪ್‌, ಸಿಸಿಟಿವಿ ಕ್ಯಾಮೆರಾಗಳಲ್ಲಿ ಮೂರನೇ ದಿನವೂ ಸಹ ಚಿರತೆಯ ಚಲನವಲನ ಕಂಡು ಬಂದಿಲ್ಲ.

ಇನ್ನೂ ಇನ್ಫೋಸಿಸ್‌ ಕಂಪೆನಿಯೂ ತಮ್ಮ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ನಲ್ಲಿ ತಮ್ಮ ತಮ್ಮ ಕೆಲಸಗಳನ್ನು ಮನೆಯಲ್ಲಿಯೇ ನಿರ್ವಹಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಎಲ್ಲಾ ಸಿಬ್ಬಂದಿಗಳು ಮನೆಯಿಂದಲೇ ತಮ್ಮ ಕಾರ್ಯ ನಿವರ್ವಹಿಸುತ್ತಿದ್ದಾರೆ.

Tags:
error: Content is protected !!