ಮೈಸೂರು: ಇಲ್ಲಿನ ಇನ್ಫೋಸಿಸ್ ಆವರಣದಲ್ಲಿ ಚಿರತೆ ಸೆರೆ ಕಾರ್ಯಾಚರಣೆ ಮುಂದುವರಿದಿದ್ದು, ಇಂದು ಸಹ ಚಿರತೆ ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಅರಣ್ಯ ಇಲಾಖೆಯ ಚಿರತೆ ಕಾರ್ಯಪಡೆ, ಆನೆ ಕಾರ್ಯಪಡೆ ಸಿಬ್ಬಂದಿ ಹಾಗೂ ಪ್ರಾದೇಶಿಕ ವಿಭಾಗದ ಒಟ್ಟು 70 ಸಿಬ್ಬಂದಿಗಳು ಹಾಗೂ 70 ಇನ್ಫೋಸಿಸ್ ಸಿಬ್ಬಂದಿಗಳನ್ನು ಒಳಗೊಂಡ 12 ಜಂಟಿ ತಂಡಗಳನ್ನು ರಚಿಸಿ ಸಂಪೂರ್ಣವಾಗಿ ಕೂಂಬಿಂಗ್ ಕಮ್ ಡ್ರೈವಿಂಗ್ ಆಪರೇಷನ್ ಕೈಗೊಳ್ಳಲಾಗಿದೆ.
ಇನ್ನು ಕಳೆದ ನಾಲ್ಕು ದಿನಗಳಿಂದ ಇಲ್ಲಿಯವರೆಗೆ ಚಿರತೆಯ ಯಾವುದೇ ಚಲನಾವಲನಗಳು, ಹೆಜ್ಜೆ ಗುರುತು ಅಥವಾ ಯಾವುದೇ ರೀತಿಯ ಚಿರತೆ ಇರುವಿಕೆಯ ಕುರುಹು ಕಂಡು ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ಫೋಸಿಸ್ ಕ್ಯಾಂಪಸ್‌ಗೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿಯೂ ಕಾರ್ಯಾಚರಣೆ ಮುಂದುವರಿಸಲಾಗಿದೆ. ಇಂದಿನ ಕಾರ್ಯಾಚರಣೆಗೆ ಏರಿಯಲ್ ಸರ್ಚ್‌ಗಾಗಿ ಎರಡು ಡ್ರೋನ್‌ಗಳು ಹಾಗೂ ಪಶುವೈದ್ಯಕೀಯ ತಂಡವನ್ನು ಬಳಸಲಾಗಿದೆ.