ಸಂತ ಫ್ರಾನ್ಸಿಸ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಕೆ.ದೀಪಕ್ ಕರೆ
ಮೈಸೂರು : ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಜ್ಞಾನದ ಜತೆಗೆ ದೇಶದ ಇತಿಹಾಸ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮಹತ್ವವನ್ನೂ ತಿಳಿದುಕೊಳ್ಳಬೇಕು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ತಿಳಿಸಿದರು.
ನಗರದ ಹೊರವಲಯದ ಜೆಟ್ಟಿಹುಂಡಿ- ಬೀರಿಹುಂಡಿಯಲ್ಲಿರುವ ಸಂತ ಫ್ರಾನ್ಸಿಸ್ ಶಾಲೆಯಲ್ಲಿ ಇಂದು ಆಯೋಜಿಸಿದ್ದ ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಾಲಾ ಪಠ್ಯಕ್ರಮದ ಜೊತೆಗೆ ಇಂದಿನ ಸ್ಪರ್ಧಾತ್ಮಕ ಮತ್ತು ಡಿಜಿಟಲ್ ಯುಗಕ್ಕೆ ಅಣಿಯಾಗಬೇಕಿದ್ದು, ಕೌಶಲ್ಯ ವೃದ್ಧಿಗೆ ಆದ್ಯತೆ ನೀಡಬೇಕು. ಸಮೂಹ ಕಲೆ, ಸಮಯ ನಿರ್ವಹಣೆ, ಭಿನ್ನ ಆಲೋಚನೆ, ನಾಯಕತ್ವ ಗುಣ ಮತ್ತು ಡಿಜಿಟಲ್ ಜ್ಞಾನವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕೇವಲ ಶಿಕ್ಷಣ, ತಂತ್ರಜ್ಞಾನ, ಕೌಶಲ್ಯ ವೃದ್ಧಿಗೆ ಸೀಮಿತರಾಗದೆ. ಈ ದೇಶದ ಸ್ವಾತಂತ್ರ್ಯದ ಮಹತ್ವ, ಪ್ರಜಾಪ್ರಭುತ್ವದ ಮಹತ್ವ , ಮಾನವೀನ ಮೌಲ್ಯ ಮತ್ತು ಸಂವಿಧಾನದ ಅರಿವು ಬಹಳ ಮುಖ್ಯ. ಆಗ ಮಾತ್ರ ನಾವು ಪರಿಪೂರ್ಣ ನಾಗರಿಕರಾಗಲು ಸಾಧ್ಯ ಎಂದು ಹೇಳಿದರು.
ನಂತರ ವಿಜ್ಞಾನ, ಗಣಿತ, ಹಿಂದಿ, ಇಂಗ್ಲಿಷ್, ಕನ್ನಡ, ಕ್ರೀಡಾ ವಿಭಾಗಗಳಲ್ಲಿ ದೇಶದ ಇತಿಹಾಸ, ಪರಂಪರೆ, ವಿಜ್ಞಾನದ ಮಾದರಿಗಳು, ಕ್ರೀಡಾ ಸಾಧಕರ ಮಾದರಿಗಳ ಅನಾವರಣಗೊಳಿಸಲಾಗೊತ್ತು.
ಶಾಲೆಯ ನಿರ್ದೇಶಕ ವಿಜಯ್ ಕುಮಾರ್ ಪೆರೆರ, ಬ್ರದರ್ ಬ್ರಿಟೊ, ಬ್ರದರ್ ಅಬಿನಾಶ್, ಪ್ರಾಂಶುಪಾಲರಾದ ಸಿಸ್ಟರ್ ಅಂಜುಮಾನ್ ಕುರಿಯನ್, ಉಪ ಪ್ರಾಂಶುಪಾಲರಾದ ರೇಣು ಶ್ರೀನಿವಾಸ್ ಹಾಜರಿದ್ದರು.