Mysore
27
scattered clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ರಾಜ್ಯದ ಸಾಲವನ್ನು ಹೆಚ್ಚಿಸಿದ್ದೇ ನಿಮ್ಮ ಸಾಧನೆಯಾ.? ಎಂ.ಜಿ.ಮಹೇಶ್‌ ಪ್ರಶ್ನೆ

M G Mahesh

ಮೈಸೂರು: ಜುಲೈ.19ಕ್ಕೆ ಮೈಸೂರಿನಲ್ಲಿ ಸಾಧನಾ ಸಮಾವೇಶ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಕ್ತಾರ ಎಂ.ಜಿ.ಮಹೇಶ್‌ ಕಿಡಿಕಾರಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಗಂಡಾಂತರ ಬಂದಾಗ ಹಿಂದುಳಿದ ವರ್ಗದ ಟ್ಯಾಗ್‌ ಹಾಕುತ್ತಾರೆ. ಈ ರೀತಿ ಸಮಾವೇಶ ಮಾಡುವ ಮೂಲಕ ಹೈಕಮಾಂಡ್‌ ನಾಯಕರಿಗೆ ಭಯ ಹುಟ್ಟಿಸುತ್ತಿದ್ದಾರೆ. ಸ್ವಾರ್ಥದ ಅಧಿಕಾರಕ್ಕೋಸ್ಕರ ರಾಜಕಾರಣ ಮಾಡಿರುವ ಏಕೈಕ ಸಿಎಂ ಸಿದ್ದರಾಮಯ್ಯ. ಸಾಧನಾ ಸಮಾವೇಶ ಮಾಡುವ ಮುನ್ನ ನಿಮ್ಮ ಸಾಧನೆ ಬಹಿರಂಗಪಡಿಸಿ. ಸಾಲ ಮಾಡಿದ್ದೇ ನಿನ್ನ ಸಾಧನೆ ಅಷ್ಟೇ ಎಂದು ವ್ಯಂಗ್ಯವಾಡಿದರು.

Tags:
error: Content is protected !!