Mysore
24
moderate rain

Social Media

ಬುಧವಾರ, 30 ಸೆಪ್ಟೆಂಬರ್ 2026
Light
Dark

ಡಿಕೆಶಿಗೆ ಸಿಎಂ ಕುರ್ಚಿ ಮೇಲೆ ಆಸೆ ಇರೋದು ನಿಜ: ಮಾಜಿ ಸಚಿವ ಕೆ.ಎನ್.ರಾಜಣ್ಣ

ಮೈಸೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಸಿಎಂ ಕುರ್ಚಿ ಮೇಲೆ ಆಸೆ ಇರುವುದು ನಿಜ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾಗುತ್ತಾರೆ ಎಂದು ನಾನು ಹೇಳುವುದಿಲ್ಲ. ಇರುತ್ತಾರೆ ಎಂದು ಕೂಡ ನಾನು ಹೇಳುವುದಿಲ್ಲ. ಕಾಂಗ್ರೆಸ್ ಹೈಕಮಾಂಡ್ ಅತಿ ಬೇಗ ಜಾಗರೂಕತೆಯಿಂದ ನಿರ್ಧಾರ ಕೈಗೊಳ್ಳಲ್ಲಿ. ನಿರ್ಧಾರ ತಡವಾದಷ್ಟು ಅದು ಪಕ್ಷಕ್ಕೆ ಮತ್ತು ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ. ಸಿಎಂಗೆ ನೀವು ಪರಿಪೂರ್ಣ ಸ್ವತಂತ್ರ ಅಧಿಕಾರಿ ಮುಂದುವರೆಸಿ ಎಂಬ ಗ್ರೀನ್ ಸಿಗ್ನಲ್ ಆದರೂ ಕೊಡಲಿ. ಇಲ್ಲಾ ಬದಲಾವಣೆ ಮಾಡುತ್ತಾರೆ ಎಂಬುದಾದರು ಹೇಳಲಿ. ಎರಡು ಬಿಟ್ಟು ಬರಿ ಗೊಂದಲವೇ ಇದ್ರೆ ಅದು ಎಲ್ಲಾ ರೀತಿಯ ಸಮಸ್ಯೆಗೆ ಕಾರಣವಾಗುತ್ತದೆ. ಡಿ.ಕೆ.ಶಿವಕುಮಾರ್‌ಗೆ ಆಸೆ ಇರುವುದು ಸಹಜ‌. ಅವರು ನಮ್ಮ ಪಕ್ಷದ ಅಧ್ಯಕ್ಷರು. ಹೀಗಾಗಿ ಸಿಎಂ ಕುರ್ಚಿ ಮೇಲೆ ಜಾಸ್ತಿಯೇ ಆಸೆ ಇದೆ. ಅದು ತಪ್ಪು ಕೂಡ ಅಲ್ಲ ಎಂದು ಹೇಳಿದರು.

 

Tags:
error: Content is protected !!