ಮೈಸೂರು: ಸರಗೂರು ತಾಲ್ಲೂಕಿನ ಬಡಗಲಪುರ ಗ್ರಾಮದಲ್ಲಿ ಹುಲಿ ದಾಳಿಗೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅಪೋಲೋ ಆಸ್ಪತ್ರೆಯ ಕನ್ಸಲ್ಟೆಂಟ್ ಪ್ಲಾಸ್ಟಿಕ್ ಸರ್ಜನ್ ಡಾ. ಸತೀಶ್ ಹೆಚ್.ವಿ ಅವರು, ದಾಳಿಗೊಳಗಾದ ವ್ಯಕ್ತಿಯ ಮುಖದ ಮೂಳೆಗಳು ಸಂಪೂರ್ಣವಾಗಿ ಮುರಿದಿದ್ದವು. ಶಸ್ತ್ರಚಿಕಿತ್ಸೆ ಮೂಲಕ ಅವುಗಳನ್ನು ಸರಿಪಡಿಸಲಾಗಿದೆ.
ಇದನ್ನು ಓದಿ: ಮೈಸೂರು: ರೈತನ ಮೇಲೆ ದಾಳಿ ಮಾಡಿದ ಹುಲಿ ಕೊನೆಗೂ ಸೆರೆ
ಪ್ರಸ್ತುತ ವ್ಯಕ್ತಿ ವೆಂಟಿಲೇಟರ್ ಮೂಲಕ ಉಸಿರಾಟ ನಡೆಸುತ್ತಿದ್ದಾನೆ. ಸ್ಥಿತಿ ಕ್ರಿಟಿಕಲ್ ಆಗಿದ್ದು, ಬಿಪಿ ಸೇರಿದಂತೆ ಇತರೆ ಪ್ರಾಥಮಿಕ ಮಾನದಂಡಗಳು ನಾರ್ಮಲ್ ಇದ್ದರೂ, ಈಗಲೇ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಡಾ.ಸತೀಶ್ ಅವರ ಪ್ರಕಾರ, ಮೆದುಳಿಗೂ ಸ್ವಲ್ಪ ಪ್ರಮಾಣದ ಹಾನಿ ಆಗಿದೆ. ಬಲಗಣ್ಣು ಸಂಪೂರ್ಣವಾಗಿ ಕಳೆದುಕೊಂಡಿದ್ದು, ಎಡಗಣ್ಣಿಗೂ ತೀವ್ರ ಹಾನಿ ಸಂಭವಿಸಿದೆ. ಎಡಗಣ್ಣಿನ ದೃಷ್ಟಿಯನ್ನು ಉಳಿಸಲು ವೈದ್ಯಕೀಯ ತಂಡವು ಎಲ್ಲಾ ಪ್ರಯತ್ನಗಳನ್ನೂ ಕೈಗೊಂಡಿದೆ.
ಸದ್ಯದ ಪರಿಸ್ಥಿತಿಯಲ್ಲಿ, ವ್ಯಕ್ತಿಯ ಸ್ಥಿತಿ ಇನ್ನೂ ಅತೀ ಗಂಭೀರ (ಕ್ರಿಟಿಕಲ್) ಆಗಿದೆ ಎಂದು ತಿಳಿಸಿದ್ದಾರೆ




