ಮೈಸೂರು: ಮುಡಾ ಹಗರಣ ಸಂಬಂಧ ನ್ಯಾಯಾಧೀಶರ ಮುಂದೆ ನಾನೇ ವಾದ ಮಂಡನೆ ಮಾಡಿದ್ದೇನೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಮುಡಾ ಹಗರಣ ಕುರಿತು ನ್ಯಾಯಾಲಯಕ್ಕೆ ಲೋಕಾಯುಕ್ತ ವರದಿ ಸಲ್ಲಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾನ್ಯ ನ್ಯಾಯಾಲಯ ವಾದ ಮಂಡಿಸಲು ನನಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ನ್ಯಾಯಧೀಶರ ಮುಂದೆ ನಾನೇ ವಾದ ಮಂಡಿಸಿದ್ದೇನೆ. ನಾನು ಮಾಡಿರುವ ಆರೋಪಗಳಿಗೆ ಸೂಕ್ತ ದಾಖಲೆ ದೊರಕಿಸಿ ವಾದ ಮಂಡಿಸಿದ್ದೇನೆ. ಲೋಕಾಯುಕ್ತ ನೀಡಿದ ವರದಿಯಲ್ಲಿದ್ದ ಲೋಪಗಳನ್ನು ಎತ್ತಿ ಹಿಡಿದಿದ್ದೇನೆ. ಮೂರು ದಿನಗಳ ಕಾಲ ನ್ಯಾಯಾಧೀಶರ ಮುಂದೆ ಲೋಕಾಯುಕ್ತ ವರದಿಯ ಸುಳ್ಳು ವರದಿಯ ಬಗ್ಗೆ ತಿಳಿಸಿದ್ದೇನೆ. ಮುಂದಿನ ತಿಂಗಳ ಏಪ್ರಿಲ್.3ರಂದು ನ್ಯಾಯಾಲಯ ಆದೇಶ ನೀಡಲಿದೆ. ಆದೇಶದಲ್ಲಿ ನನ್ನ ಅರ್ಜಿ ಪುರಸ್ಕೃತಗೊಂಡು, ಲೋಕಾಯುಕ್ತ ವರದಿ ತಿರಸ್ಕೃತವಾಗಲಿದೆ. ಆ ಮೂಲಕ ಆರೋಪಿಗೆ ತಕ್ಕ ಶಿಕ್ಷೆಯಾಗಲಿದೆ ಎನ್ನುವ ನಂಬಿಕೆ ನನ್ನಲ್ಲಿದೆ ಎಂದರು.