Mysore
20
few clouds

Social Media

ಮಂಗಳವಾರ, 20 ಜನವರಿ 2026
Light
Dark

ನನಗೆ ಸಿಎಂ ಸಿದ್ದರಾಮಯ್ಯ ಸ್ಥಿತಿ ಕಂಡು ಬೇಸರವಾಗಿದೆ: ಪ್ರತಾಪ್‌ ಸಿಂಹ

ಮೈಸೂರು: ಸಿಎಂ ಸಿದ್ದರಾಮಯ್ಯಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಭೇಟಿಗೆ ಅವಕಾಶ ಸಿಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್‌ ಸಿಂಹ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯಗೆ ಈ ದೈನಸಿ ಸ್ಥಿತಿ ಬರಬಾರದಿತ್ತು. ಮೈಸೂರಿಗನಾಗಿ, ಕನ್ನಡಿಗನಾಗಿ ನನಗೆ ಸಿಎಂ ಸ್ಥಿತಿ ಕಂಡು ಬೇಸರವಾಗಿದೆ. ಇಂದಿರಾಗಾಂಧಿ, ಸೋನಿಯಾ ಗಾಂಧಿಯನ್ನೇ ಟೀಕೆ ಮಾಡುತ್ತಿದ್ದ ಸಿದ್ದರಾಮಯ್ಯ ಅವರು ಈಗ ಅವರ ಮೊಮ್ಮಗನ ಪಾದ ಪೂಜೆ ಮಾಡಲು ಸಿದ್ಧವಾಗಿರೋದು ಬೇಸರ ತಂದಿದೆ. ಸಿಎಂ ಸಿದ್ದರಾಮಯ್ಯ ಅವರೇ ನೀವು ಹುಲಿಯಾನಾ‌ ಇಲಿಯಾನಾ ಹೇಳಿ? ಕಳೆದ 2013ರಲ್ಲಿ ಸಿದ್ದರಾಮಯ್ಯ ಹುಲಿಯಾ ಆಗಿದ್ದರು. ಈಗ ಸಿದ್ದರಾಮಯ್ಯ ಇಲಿಯಾಗಿದ್ದಾರೆ. ರಾಹುಲ್‌ ಗಾಂಧಿ ಭೇಟಿಗೆ ಸಿದ್ದರಾಮಯ್ಯ ಗೇಟ್‌ನಲ್ಲಿ ಕಾಯುತ್ತಿರುವುದು ನಮಗೆ ಬೇಸರ ತರಿಸಿದೆ ಎಂದು ಹೇಳಿದರು.

ಇದನ್ನು ಓದಿ: ಚುನಾವಣೆ ವೇಳೆಯಲ್ಲೇ ಬಾಂಬ್ ಬ್ಲಾಸ್ಟ್: ಕೇಂದ್ರವೇ ತನಿಖೆ ಮಾಡಲಿ ಎಂದ ಸಿಎಂ ಸಿದ್ದರಾಮಯ್ಯ

ಇನ್ನು ದೆಹಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮುಸ್ಲಿಂ ವಿದ್ಯಾವಂತರೆ ಭಯೋತ್ಪಾದಕರಾಗಿ ಬದಲಾಗುತ್ತಿದ್ದಾರೆ. ಇದು ಬಹಳ ಅಪಾಯಕಾರಿ. ಮುಸ್ಲಿಂಮರ ಸಮಸ್ಯೆ ಬಡತನ ಅಲ್ಲ.‌ ಅವರ ಒಳಗಿನ ಧರ್ಮಾಂಧತೆ, ಅವರ ಮನಃಸ್ಥಿತಿಯೆ ಅವರ ಸಮಸ್ಯೆ. ವಿದ್ಯಾವಂತ ಮುಸ್ಲಿಂಮರು ಭಯೋತ್ಪಾದಕರಾದರೆ ಅವರನ್ನು ಪತ್ತೆ ಹಚ್ಚುವುದು ಹೇಗೆ? ಹಿಂದೂ ರಾಷ್ಟ್ರ ಆಗಲು ಬಿಡಲ್ಲ ಎಂದಿರುವ ಸಿಎಂ ಸಿದ್ದರಾಮಯ್ಯ ಇದನ್ನು ಮುಸ್ಲಿಂ ರಾಷ್ಟ್ರ ಮಾಡುತ್ತಾರಾ? ಸಿದ್ದರಾಮಯ್ಯರಂತಹ ನಾಯಕರು ಇರುವಾಗ ದೇಶದ ಒಳಗೆ ಇಂತಹ ಪರಿಸ್ಥಿತಿಯನ್ನು ನಾವು ಎದುರಿಸಲೇಬೇಕು.

ಸಿದ್ದರಾಮಯ್ಯ ಸರ್ಕಾರದ ಯೋಗ್ಯತೆಗೆ ಜೈಲಿನಲ್ಲಿನ ಭಯೋತ್ಪಾದಕನನ್ನೆ ಬಿಗಿ ಹಿಡಿಯಲು ಆಗುತ್ತಿಲ್ಲ. ಇನ್ನೂ ಇವರೇನೂ ಕೇಂದ್ರ ಸರ್ಕಾರದ ಬಗ್ಗೆ ಮಾತಾಡೋದು. ಯುಪಿಎ ಸರಕಾರದಲ್ಲಿ ಸರಣಿ ಬಾಂಬ್ ಸ್ಫೋಟವಾಗಿದೆ. ಮೋದಿ ಅಧಿಕಾರಕ್ಕೆ ಬಂದಾಗ ದೇಶದ ಒಳಗೆ ನಡೆದ ಮೊದಲ ದೊಡ್ಡ ಸ್ಫೋಟ ಇದು. ಭಾರತದ ಒಳಗಿನ ಮುಲ್ಲಾಗಳೇ ಈ ರೀತಿಯ ಸ್ಫೋಟಕ್ಕೆ ತಯಾರಾಗುತ್ತಿದ್ದಾರೆ. ಮೊದಲು ಭಾರತದೊಳಗೆ ಬಾಂಬ್ ಇಡಲು ಪಾಕಿಸ್ತಾನದಿಂದ ಬರುತ್ತಿದ್ದರು. ಈಗ ನಮ್ಮ ದೇಶದೊಳಗೆ ಇಂತವರು ತಯಾರಾಗಿದ್ದಾರೆ. ದೇಶದ ಒಳಗಡೆ ಇಡುವವರೆ ಬಾಂಬ್ ಇಡಲು ಹೊರಟರೆ ಮೋದಿ ಅದನ್ನು ತಡಿಯಲು ಆಗುತ್ತಾ? ಎಂದು ಪ್ರಶ್ನೆ ಮಾಡಿದರು.

Tags:
error: Content is protected !!