ಮೈಸೂರು: ನಗರದ ಲಕ್ಷ್ಮೀಪುರಂ ಮತ್ತು ಕೃಷ್ಣರಾಜ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕಳೆದ 38 ವರ್ಷಗಳಿಂದ ದಿನನಿತ್ಯದ ಠಾಣೆಯ ಸ್ವಚ್ಚತೆ ಕರ್ತವ್ಯ ಮಾಡುತ್ತಿದ್ದ ಮಹದೇವಮ್ಮ ಎಂಬುವವರನ್ನು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸನ್ಮಾನಿಸಿ ಅಭಿನಂದಿಸಿದರು.
ಕಳೆದ 38 ವರ್ಷಗಳಿಂದ ದಿನನಿತ್ಯ ಪೊಲೀಸ್ ಠಾಣೆಯ ಸ್ವಚ್ಛತೆ ಕರ್ತವ್ಯ ಮಾಡುತ್ತಿದ್ದ ಮಹದೇವಮ್ಮ ಅವರು, ಕಾಯಕವೇ ಕೈಲಾಸ ಎಂಬ ಗಾದೆ ಮಾತಿನಂತೆ ಕೆಲಸ ನಿರ್ವಹಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಮಹದೇವಮ್ಮ ಅವರ ಕಾಯಕವನ್ನು ನೋಡಿದ ಪೊಲೀಸರು ಹಾಗೂ ನಗರ ಪೊಲೀಸ್ ಆಯಕ್ತೆ ಸೀಮಾ ಲಾಟ್ಕರ್ ಅವರು ಇಂದು ಗೌರವಪೂರ್ವಕವಾಗಿ ಸನ್ಮಾನಿಸಿದರು. ಬಳಿಕ ಅಜ್ಜಿ ಮಹದೇವಮ್ಮ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.





