ಮೈಸೂರು : ಟೆಲಿಗ್ರಾಂ ಮೂಲಕ ಷೇರು ಮಾರುಕಟ್ಟೆ ಬಗ್ಗೆ ತಿಳಿದ ವ್ಯಕ್ತಿಯೊಬ್ಬರು ಹೆಚ್ಚಿನ ಲಾಭದ ಆಸೆಗೆ ಬಿದ್ದು ನಕಲಿ ಕಂಪೆನಿಯ ಮೂಲಕ ಹೂಡಿಕೆ ಮಾಡಿದ ವ್ಯಕ್ತಿಯೊಬ್ಬರು 2.59 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.
ಕುವೆಂಪುನಗರ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ಷೇರು ಮಾರುಕಟ್ಟೆ ಬಗ್ಗೆ ತಿಳಿದಿದ್ದಾರೆ. ನಂತರ ಅಲ್ಲಿನ ವೆಬ್‌ಸೈಟ್‌ನ್ನು ಗಮನಿಸಿದ್ದಾರೆ. ನಂತರ ಅಲ್ಲಿನ ಮೊಬೈಲ್ ಸಂಖ್ಯೆಗೆ ಕರೆಮಾಡಿದ್ದಾರೆ.
ನಂತರ ಅವರು ಹೇಳಿದಂತೆ ಹಣವನ್ನು ಹೂಡಿಕೆ ಮಾಡಿದ್ದಾರೆ. ಮೊದಲಿಗೆ ಅವರು ಸ್ವಲ್ಪ ಲಾಭ ನೀಡಿ ನಂಬಿಕೆ ಬರುವಂತೆ ಮಾಡಿದ್ದಾರೆ. ನಂತರ ಹಂತ ಹಂತವಾಗಿ 2,79,777 ರೂ. ಹಣವನ್ನು ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದಾರೆ. ಈ ಸಂಬಂಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: ಷೇರುಪೇಟೆ ಹೆಸರಲ್ಲಿ ವ್ಯಕ್ತಿಗೆ 30 ಲಕ್ಷ ರೂ. ವಂಚನೆ
ಕಾರ್ಖಾನೆ ಆವರಣದಲ್ಲಿ ಕಳ್ಳತನ : ದೂರು
ಮೈಸೂರು: ಕಾರ್ಖಾನೆಯ ಹಿಂಬದಿಯ ಕಾಂಪೌಂಡ್ ಹಾರಿ ಬಂದು ಅಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ವಿವಿಧ ವಸ್ತುಗಳನ್ನು ಖದೀಮರು ಕದ್ದೊಯ್ದಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಎಂಜಿಎಂ ಕಾರ್ಖಾನೆ ಆವರಣದಲ್ಲಿ ಈ ಘಟನೆ ನಡದಿದೆ. ನ.೧೮ ರಂದು ಸಂಜೆ ಹಾಗೂ ನ.೧೯ರ ಬೆಳಿಗ್ಗೆ ೭ ಗಂಟೆ ಅವಽಯಲ್ಲಿ ಈ ಘಟನೆ ನಡೆದಿದೆ.
ಕಾಂಪೌಂಡ್ ಹಾರಿ ಒಳಬಂದಿರುವ ಖದೀಮರು ಅಲ್ಲಿನ ಸ್ಟೋರ್ ರೂಮ್‌ನಲ್ಲಿ ಇಟ್ಟಿದ್ದ ಮೋಟಾರ್‌ಗಳು ಸೇರಿದಂತೆ ವಿವಿಧ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





