Mysore
28
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಚಾಮುಂಡಿಬೆಟ್ಟಕ್ಕೆ ಟೀಂ ಇಂಡಿಯಾ ಮಾಜಿ ಬೌಲರ್‌ ಆರ್‌ಪಿ ಸಿಂಗ್‌ ಭೇಟಿ

R.P Singh

ಮೈಸೂರು: ಟೀಂ ಇಂಡಿಯಾದ ಮಾಜಿ ಬೌಲರ್‌ ರುದ್ರ ಪ್ರತಾಪ್‌ ಸಿಂಗ್‌ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡ ಅಧಿದೇವತೆಯ ದರ್ಶನ ಪಡೆದರು.

ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋಗಳನ್ನು ಆರ್‌ಪಿ ಸಿಂಗ್‌ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

2009ರ ಟಿ.20 ವಿಶ್ವಕಪ್‌ ಚಾಂಪಿಯನ್‌ ತಂಡದ ಸದಸ್ಯರಾಗಿದ್ದ ಇವರು 58 ಏಕದಿನ ಪಂದ್ಯಾವಳಿಯಲ್ಲಿ 69 ವಿಕೆಟ್‌ ಪಡೆದಿದ್ದಾರೆ.

ಇಂಗ್ಲೆಂಡ್‌ ವಿರುದ್ದ 2011ರಲ್ಲಿ ಕೊನೆಯ ಪಂದ್ಯವಾಡಿದ್ದ ಇವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ರೈಸಿಂಗ್‌ ಪುಣೆ ಸೂಪರ್‌ ಜೈಂಟ್ಸ್‌ ರಾಯಲ್‌ ಚಾಲೆಂಜರ್ಸ್‌ ತಂಡವನ್ನು ಪ್ರತಿನಿಧಿಸಿದ್ದರು.

ಉತ್ತರ ಪ್ರದೇಶದ ಮೂಲದ ಆರ್‌ಪಿ ಸಿಂಗ್‌ ಇಂಡಿಯಾ ಚಾಂಪಿಯನ್ಸ್ ತಂಡದ ಭಾಗವಾಗಿದ್ದು 2024ರಲ್ಲಿ ಆಸ್ಟೇಲಿಯಾ ವಿರುದ್ಧ ಆಡಿದ್ದರು.

Tags:
error: Content is protected !!